ಕೊಪ್ಪದಲ್ಲಿ ಆಯೋಜಿಸಿದ್ದ ಲಯನ್ಸ್ 317-ಡಿ ಜಿಲ್ಲಾ ಗವರ್ನರ್ ಎಚ್.ಎಂ.ತಾರಾನಾಥ್ ಪದಗ್ರಹಣ ಸಮಾರಂಭವನ್ನು ಸಬಿತಾ ತಾರಾನಾಥ್ ಉದ್ಘಾಟಿಸಿದರು.  
ಚಿಕ್ಕಮಗಳೂರು

ಬಾಹ್ಯಾಕಾಶ ಕ್ಷೇತ್ರ, ರಕ್ಷಣಾ ಕ್ಷೇತ್ರದಲ್ಲಿ ಭಾರತ ಮುಂದು

ಕೊಪ್ಪ: ಬಾಹ್ಯಾಕಾಶ, ರಕ್ಷಣಾ ಕ್ಷೇತ್ರದಲ್ಲಿ ಭಾರತ ಕಳೆದ ಮೂರು ದಶಕಗಳಲ್ಲಿ ಸಾಧನೆ ಮಾಡುತ್ತಿದ್ದು, ಇಂತಹ ಸಾಧನೆಗೆ ಮಾನವ ಸಂಬಂಧಗಳು ಮುಖ್ಯ ಎಂದು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಕುಲಾಪತಿ ಡಾ.ಬಿ.ಎನ್.ಸುರೇಶ್ ತಿಳಿಸಿದರು.
ಬಂಟರ ಭವನದಲ್ಲಿ ಆಯೋಜಿಸಿದ್ದ ಲಯನ್ಸ್ 317-ಡಿ ಜಿಲ್ಲಾ ಗವರ್ನರ್ ಎಚ್.ಎಂ.ತಾರಾನಾಥ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ವಿಜ್ಞಾನ ತಂತ್ರಜ್ಞಾನದಲ್ಲಿ ದೇಶ ಮುಂಚೂಣಿಯಲ್ಲಿದೆ. ಜಗತ್ತು ಭಾರತದತ್ತ ತಿರುಗಿ ನೋಡುವಂತಹ ಸಾಹಸಗಳನ್ನು ನಮ್ಮ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಮಾಡುತ್ತಿದೆ. ದೇಶದ ಅಭಿವೃದ್ಧಿಗೆ ವಿಜ್ಞಾನ ಹೆಚ್ಚು ಕೊಡುಗೆ ನೀಡುತ್ತಿದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಜೈ ಜವಾನ್, ಜೈ ಕಿಸಾನ್ ಜತೆಗೆ ಜೈ ವಿಜ್ಞಾನ್ ಸೇರಿಸಿದರು. 2047ರ ಹೊತ್ತಿಗೆ ನಮ್ಮ ದೇಶ ಪ್ರಧಾನ ದೇಶವಾಗಬೇಕು ಎಂಬ ದಿಕ್ಕಿನಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಲಯನ್ಸ್ ಜಿಲ್ಲಾ ಗವರ್ನರ್ ಎಚ್.ಎಂ.ತಾರಾನಾಥ್ ಮಾತನಾಡಿ, ನಿಮ್ಮೆಲ್ಲರ ಸಹಕಾರವೇ ನನ್ನ ಶಕ್ತಿ. ಕೇವಲ ಯಶಸ್ಸು ನಮ್ಮ ಗುರಿಯಲ್ಲ. ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ಕೊಡಬೇಕು. ಯುವ ಸಮುದಾಯಕ್ಕೆ ಪ್ರೋತ್ಸಾಹ ನೀಡಬೇಕು. ಪ್ರತಿಯೊಬ್ಬರೂ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಸೇವಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ಲಯನ್ಸ್ ಸದಸ್ಯರು ಸೇವಾ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ನಾವು ಮಾಡುವ ಸಣ್ಣ ಕೆಲಸಗಳು ದೇಶದ ಏಳಿಗೆಗೆ ಅಡಿಪಾಯವಾಗುತ್ತದೆ. ಸಮಾಜದ ಒಂದು ಭಾಗವಾಗಿ ಇತರರನ್ನು ಬೆಳೆಸುವಲ್ಲಿ ಮುಂದಾಗಬೇಕು ಎಂದು ಹೇಳಿದರು.