ಕಡೂರು ತಾಲೂಕಿನ ಕಂಸಾಗರ ಗ್ರಾಮದ ಶ್ರೀ ಕರಿಯಮ್ಮ ದೇವಾಲಯ ಲೋಕಾರ್ಪಣೆಗೆ ಸಿದ್ದಗೊಂಡಿರುವುದು. 
ಚಿಕ್ಕಮಗಳೂರು

ಕಂಸಾಗರದ ಶ್ರೀ ಕರಿಯಮ್ಮ ದೇವಿ ಪ್ರಾರಂಭೋತ್ಸ, ಜಾತ್ರಾಮಹೋತ್ಸವ 15ಕ್ಕೆ

ಕಡೂರು: ತಾಲೂಕಿನ ಕಂಸಾಗರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ನೂತನ ದೇವಾಲಯ ಪ್ರಾರಂಭೋತ್ಸದ ಜಾತ್ರಾ ಮಹೋತ್ಸವ ನ.15ರಿಂದ 17ರವರೆಗೆ ಮೂರು ದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಿದೆ ಎಂದು ದೇವಸ್ಥಾನದ ಗೌರವಾಧ್ಯಕ್ಷ ಕಂಸಾಗರ ರೇವಣ್ಣ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನ.15 ರಂದು ಬೆಳಗ್ಗೆ ಧ್ವಜಾರೋಹಣ, ಗಣಪತಿ ಪೂಜೆ, ಸಂಜೆ ಹೊಸದುರ್ಗದ ಶ್ರೀ ದೇವಪುರ ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿಯನ್ನು ಬರಮಾಡಿಕೊಳ್ಳಲಾಗುತ್ತದೆ. ನಂತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳ, 16ರಂದು ಬೆಳಗ್ಗೆ ಗಂಗಾಪೂಜೆ, ಗೋ ಪೂಜೆಯೊಂದಿಗೆ ಶ್ರೀ ಕರಿಯಮ್ಮ ದೇವಿಯ ದೇವಾಲಯದ ಪ್ರವೇಶೋತ್ಸವ ನಡೆಯಲಿದ್ದು, ಬಳಿಕ ನಾಗದೇವತೆ ಮತ್ತು ಗಣಪತಿ ಪ್ರತಿಷ್ಠಾಪನೆ ಜರುಗಲಿದೆ ಎಂದರು.

ಅಂದು ಬೆಳಗ್ಗೆ 9 ಗಂಟೆಗೆ ಕಾಗಿನೆಲೆ ಕೆ.ಆರ್.ನಗರದ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಳಸಾರೋಹಣ ಹಾಗೂ ಗ್ರಾಮದಲ್ಲಿರುವ ಮುಖ್ಯವೃತ್ತದಲ್ಲಿನ ಕನಕದಾಸರ ಪ್ರತಿಮೆ ಪುನರ್ ಪ್ರತಿಷ್ಠಾಪನೆ ಮಹೋತ್ಸವ ನಡೆಯಲಿದೆ. ನಂತರ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಕ್ಷೇತ್ರದ ಶಾಸಕರು, ಮಾಜಿ ಶಾಸಕರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ನ.17ರಂದು ಕರಿಯಮ್ಮ ದೇವಿಯವರ ಹೊಳೆಪೂಜೆ ಮಹೋತ್ಸವ ಮತ್ತು ದೇವಾಲಯ ಪ್ರವೇಶೋತ್ಸವ, ಸಂಜೆ ಗ್ರಾಮದೇವರುಗಳ ಉತ್ಸವ ಜರುಗಲಿದೆ ಎಂದು ತಿಳಿಸಿದರು.

ದೇವಾಲಯ ಸಮಿತಿ ಟ್ರಸ್ಟ್ ಅಧ್ಯಕ್ಷ ಕೆ.ಹೆಚ್. ಗೋಪಿನಾಥ, ಪದಾಧಿಕಾರಿಗಳಾದಕೆ.ರವಿಕುಮಾರ್, ಪಟೇಲ್.ರಮೇಶ, ಕೆ.ಎಸ್.ಲೋಕೇಶಪ್ಪ. ಪರಮೇಶ, ಕೆ.ಎಚ್. ರಘು. ಡಿ. ಹರೀಶ್,ಕೆ.ಮಲ್ಲೇಶ, ದೇವರಾಜ, ಲಕ್ಷ್ಮಣ, ಎಂ.ಗಂಗಾಧರ, ಡಿ.ರಮೇಶ, ಜಿ. ಲೋಕೇಶ್,ಡಿ.ತ್ಯಾಗರಾಜ್,ಕೆ.ಎಸ್.ಕೃಷ್ಣಮೂರ್ತಿ, ಕೆ.ಪಿ. ಸುಶೀಲ್, ಮದಾಳಪ್ಪ, ದೇಪುರಪ್ಪ, ಪೂಜಾರರಾದ ಅಶೋಕ್.ಚೇತನ್ ಮತ್ತಿತರಿದ್ದರು.