ಎನ್.ಆರ್.ಪುರದಲ್ಲಿ ಎಚ್.ಟಿ.ರಾಜೇಂದ್ರ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಡಿ.ಸಿ.ದಿವಾಕರ ಉದ್ಘಾಟಿಸಿದರು. 
ಚಿಕ್ಕಮಗಳೂರು

ಎಚ್.ಟಿ.ರಾಜೇಂದ್ರ ಬದುಕು ಸಮಾಜಕ್ಕೆ ಆದರ್ಶ

ಎನ್.ಆರ್.ಪುರ: ಚಿಂತಕ ಎಚ್.ಟಿ.ರಾಜೇಂದ್ರ ಅವರು ಕುವೆಂಪು ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ದಿ.ಎಚ್.ಟಿ.ರಾಜೇಂದ್ರ ಅಭಿಮಾನಿ ಬಳಗ ಏರ್ಪಡಿಸಿದ್ದ ದಿ.ಎಚ್.ಟಿ.ರಾಜೇಂದ್ರ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಚ್.ಟಿ.ರಾಜೇಂದ್ರ ಜತೆಗೆ ನನಗೆ 50 ವರ್ಷಗಳ ಒಡನಾಟವಿತ್ತು. ರೈತ ಸಂಘ, ಡಿಸಿಎಂಸಿ ಶಾಲೆ, ಒಕ್ಕಲಿಗರ ಸಂಘ, ಮಡಬೂರು ದೇವಸ್ಥಾನದಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿದ್ದು, ಎಲ್ಲ ಧರ್ಮ, ಜಾತಿಯವರು ಒಟ್ಟಾಗಿ ಬಾಳಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.
ಅಮ್ಮ ೌಂಡೇಷನ್ ಅಧ್ಯಕ್ಷ ಸುಧಾಕರ್.ಎಸ್.ಶೆಟ್ಟಿ ಮಾತನಾಡಿ, ಎಚ್.ಟಿ.ರಾಜೇಂದ್ರ ಅಭಿಮಾನಿ ಬಳಗ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ರಾಜೇಂದ್ರ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಕಳೆದ ವರ್ಷ ಇದೇ ದಿನ ಅವರು ಮೃತಪಟ್ಟಾಗ ಇಡೀ ಶೃಂಗೇರಿ ಕ್ಷೇತ್ರ ಬಂದ್ ಆಗಿತ್ತು ಎಂದರು.
ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಎಚ್.ಟಿ.ರಾಜೇಂದ್ರ ಅವರ ಬದುಕು ಸಮಾಜಕ್ಕೆ ಆದರ್ಶವಾಗಿದೆ. ರಾಜಕಾರಣ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ಜಿಲ್ಲೆಯಾದ್ಯಂತ ಅವರ ಅಭಿಮಾನಿಗಳಿದ್ದಾರೆ ಎಂದರು.
ಎಚ್.ಟಿ.ರಾಜೇಂದ್ರ ಅವರ ನಿಕಟವರ್ತಿ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ರಾಜೇಂದ್ರ ಅವರು ವೈಯ್ಯಕ್ತಿಕ ಬದುಕಿಗಿಂತ ಸಮಾಜಮುಖಿ ಕೆಲಸಕ್ಕೆ ಹೆಚ್ಚು ಸಮಯ ನೀಡುತ್ತಿದ್ದರು. ಕುವೆಂಪು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ, ಪಪಂ ಮಾಜಿ ಅಧ್ಯಕ್ಷ ಜುಬೇದ, ಕಣಿವೆ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಕಣಿವೆ ವಿನಯ್, ಇ.ಸಿ.ಜೋಯಿ, ವರ್ಕಾಟೆ ಸುಧಾಕರ್, ಅಬ್ದುಲ್ ಸುಬಾನ್, ಸೇವಿಯಾರ್ ಇದ್ದರು.