ಎನ್.ಆರ್.ಪುರದಲ್ಲಿ ಎಚ್.ಟಿ.ರಾಜೇಂದ್ರ ಅಭಿಮಾನಿಗಳ ಬಳಗ ಉದ್ಘಾಟನೆ ಪೂರ್ವಭಾವಿ ಸಭೆ ನಡೆಯಿತು.
ಎನ್.ಆರ್.ಪುರ:ಎಚ್.ಟಿ.ರಾಜೇಂದ್ರ ಅವರು ಮಾನವತಾವಾದಿ, ಶಿಕ್ಷಣ ತಜ್ಞ, ಪ್ರಮಾಣಿಕ ರಾಜಕಾರಣಿಯಾಗಿ ಹೆಸರುವಾಸಿಯಾಗಿದ್ದು, ಅವರ ತತ್ವ, ಸಿದ್ಧಾಂತಗಳನ್ನು ಜೀವಂತವಾಗಿರಿಸಲು ಅವರ ಅಭಿಮಾನಿಗಳ ಬಳಗ ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಎಚ್.ಟಿ.ರಾಜೇಂದ್ರ ಅಭಿಮಾನಿಗಳ ಬಳಗದ ಅಧ್ಯಕ್ಷ ಎಂ.ಆರ್.ಸುಂದರೇಶ್ ತಿಳಿಸಿದರು.
ಪಟ್ಟಣದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ, ಎಚ್.ಟಿ.ರಾಜೇಂದ್ರ ಅವರ ಅಭಿಮಾನಿಗಳ ಬಳಗದ ಮೂಲಕ ರಕ್ತದಾನ ಶಿಬಿರ, ಸಾಮಾಜಿಕ ಚಟುವಟಿಕೆಗಳು, ಶೈಕ್ಷಣಿಕ, ಸಮಾಜಮುಖಿ ಕಾರ್ಯಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಪ್ರಸ್ತುತ ಅವರ ಹುಟ್ಟೂರಲ್ಲಿ ಅವರ ಅಭಿಮಾನಿ ಬಳಗವನ್ನು ತಾಲೂಕು ಮಟ್ಟದಲ್ಲಿ ಅಸ್ತಿತ್ವಕ್ಕೆ ತಂದು ಮುಂದಿನ ದಿನಗಳಲ್ಲಿ ಕ್ಷೇತ್ರಮಟ್ಟದ ಅಭಿಮಾನಿಗಳ ಬಳಗ ಮಾಡಲಾಗುವುದು. ಕೊಪ್ಪ, ಶಂಗೇರಿ ತಾಲೂಕುಗಳಲ್ಲೂ ಕೂಡ ಅಭಿಮಾನಿಗಳ ಬಳಗ ಸ್ಥಾಪಸಿಲಾಗುವುದು ಎಂದರು.
ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಎಚ್.ಟಿ.ರಾಜೇಂದ್ರ ಅವರು ನಿಸ್ವಾರ್ಥ ರಾಜಕಾರಣಿ, ಜಾತ್ಯಾತೀತ, ಪಕ್ಷಾತೀತ ರಾಜಕಾರಣಿಯಾಗಿದ್ದಾರೆ. ಚುನಾವಣೆಗಳಲ್ಲಿ ಗೆಲ್ಲದಿದ್ದರೂ ಅಧಿಕಾರದ ಆಸೆಗಾಗಿ ಬೇರೆ ಪಕ್ಷಕ್ಕೆ ಹೋಗದೆ ಪಕ್ಷ ನಿಷ್ಠೆ ಮೆರೆದಿದ್ದಾರೆ. ಅಭಿವೃದ್ಧಿ ವಿಚಾರವಾಗಿ ಬೇರೆ, ಬೇರೆ ಪಕ್ಷದ ನಾಯಕರು, ಮುಖಂಡರು ರಾಜೇಂದ್ರ ಬಳಿ ಸಲಹೆ, ಸಹಕಾರ ಪಡೆಯುತ್ತಿದ್ದರು ಎಂದರು.
ಕಾರ್ಯದರ್ಶಿ ಅಬ್ದುಲ್‌ಸುಬಾನ್ ಮಾತನಾಡಿ, ಜು.13ರಂದು ಎಚ್.ಟಿ.ರಾಜೇಂದ್ರ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ. ಆದ್ದರಿಂದ ಅಂದೇ ಅಭಿಮಾನಿಗಳ ಬಳಗ ಉದ್ಘಾಟಿಸಲಾಗುವುದು ಎಂದರು. ಖಜಾಂಚಿ ಮಡಬೂರು ಸತೀಶ್, ಉಪಾಧ್ಯಕ್ಷ ಕೋಣಿಕೆರೆ ವಿಜೇಂದ್ರ, ಪದಾಧಿಕಾರಿಗಳಾದ ಉಪೇಂದ್ರ, ವರ್ಕಾಟೆ ಹೂವಣ್ಣ, ವರ್ಕಾಟೆಸುಧಾಕರ, ಕರುಗುಂದ ಚಂದ್ರು, ಸಿದ್ಧನಕುಡಿಗೆ ಮನು, ಶೈಲೇಶ್, ಸತ್ಯನಾರಾಯಣ ಶ್ರೇಷ್ಠಿ ಇದ್ದರು.