ರಾಷ್ಟ್ರಪತಿ ಶ್ಲಾಘನೀಯ ಪೊಲೀಸ್ ಪದಕಕ್ಕೆ ಭಾಜನರಾದ ಮುಖ್ಯಪೇದೆ ಅಬ್ದುಲ್ ರಬ್ಬಾನಿಯ ಅವರನ್ನು ಲಿಂಗದಹಳ್ಳಿ ಠಾಣೆಯಲ್ಲಿ ಸನ್ಮಾನಿಸಲಾಯಿತು. ರಾಜಕುಮಾರ್, ಮಂಜುಳಾಬಾಯಿ, ಗಿರೀಶ್, ಈಶ್ವರನಾಯ್ಕ, ಓಂಕಾರಪ್ಪ ಇತರರಿದ್ದರು. 
ಚಿಕ್ಕಮಗಳೂರು

ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಸನ್ಮಾನ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಪೇದೆ
  • ಮನಸ್ಸಿಗೂ ಶಾಂತಿ, ನೆಮ್ಮದಿ

ಲಿಂಗದಹಳ್ಳಿ: ಕಾಯಕವೇ ಕೈಲಾಸವೆಂಬಂತೆ ಕೆಲಸವನ್ನು ನ್ಯಾಯ, ನಿಷ್ಠೆಯಿಂದ ಮಾಡಿದಾಗ ಉನ್ನತ ಸ್ಥಾನಕ್ಕೆ ಹೋಗುವುದರೊಂದಿಗೆ ಮನಸ್ಸಿಗೂ ಶಾಂತಿ, ನೆಮ್ಮದಿ ಸಿಗಲಿದೆ ಎಂದು ರಾಷ್ಟ್ರಪತಿ ಪೊಲೀಸ್ ಶ್ಲಾಘನೀಯ ಪದಕಕ್ಕೆ ಭಾಜನರಾಗಿರುವ ಮುಖ್ಯಪೇದೆ ಅಬ್ದುಲ್ ರಬ್ಬಾನಿ ತಿಳಿಸಿದರು. ಲಿಂಗದಹಳ್ಳಿ ಆರಕ್ಷಕ ಠಾಣೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಆರಕ್ಷಕ ಇಲಾಖೆ ಜನರ ಕಷ್ಟ-ಸುಖಗಳಿಗೆ ನೇರವಾಗಿ ಸ್ಪಂದಿಸುತ್ತದೆ. ನ್ಯಾಯ, ನಿಷ್ಠೆಯಿಂದ ಕಾರ್ಯನಿರ್ವಹಿಸಿ ಇಲಾಖೆ ಜತೆಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ಪಡೆದುಕೊಳ್ಳಬಹುದು  ಎಂದರು. ಲಿಂಗದಹಳ್ಳಿ ಆರಕ್ಷಕ ಠಾಣಾಧಿಕಾರಿ ರಾಜಕುಮಾರ್ ಹುತ್ತಲಿ ಮಾತನಾಡಿ, ನಾನು ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಗೊಂಡು ಬಂದಿದ್ದರೂ ಅಬ್ದುಲ್ ರಬ್ಬಾನಿ ಕಾರ್ಯಕ್ಷಮತೆ ತಿಳಿದುಕೊಂಡಿದ್ದೇನೆ. ಲಿಂಗದಹಳ್ಳಿ ಹೋಬಳಿ ಜೈಪುರ ಗ್ರಾಮದಲ್ಲಿ ಹುಟ್ಟಿ ಬೆಳೆದ ಗ್ರಾಮೀಣ ಪ್ರತಿಭೆ ಎಂದರು. ಲಿಂಗದಹಳ್ಳಿ ಕ್ರೈಂ ವಿಭಾಗದ ಪಿಎಸ್‌ಐ ಮಂಜುಳಾಬಾಯಿ, ಸಿಬ್ಬಂದಿ ಮಲ್ಲಿಕಾರ್ಜುನ್, ಗಿರೀಶ್, ಸಿದ್ದೇಶ್, ಈಶ್ವರನಾಯ್ಕ, ಓಂಕಾರಪ್ಪ, ವಿಶ್ವನಾಥ, ಹನುಮನಾಯ್ಕ ಇತರರಿದ್ದರು.