ತ್ಯಾವಣದಲ್ಲಿ ಮಳೆಯಿಂದ ಗುಡ್ಡ ಕುಸಿದಿರುವುದು.  
ಚಿಕ್ಕಮಗಳೂರು

ತ್ಯಾವಣದಲ್ಲಿ ಜರಿದ ಗುಡ್ಡ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ರಸ್ತೆಯಿಂದ
  • ವಿದ್ಯುತ್ ಮಾರ್ಗಕ್ಕೆ
ಶೃಂಗೇರಿ: ಒಂದು ವಾರದಿಂದ ಬಿರುಸುಗೊಂಡಿದ್ದ ಮುಂಗಾರು ಬುಧವಾರ ಕ್ಷೀಣಿಸಿದ್ದು, ಗಾಳಿಯ ರಭಸವೂ ಕಡಿಮೆಯಾಗಿದೆ. ಆಗಾಗ ಮಳೆ ಅಬ್ಬರಿಸುತ್ತಿದ್ದು, ತುಂಗಾ ನದಿಯ ನೀರಿನ ಮಟ್ಟದಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ತ್ಯಾವಣದಲ್ಲಿ ಗುಡ್ಡ ಕುಸಿಸಿದೆ.
ಪಟ್ಟಣದ ಮುಖ್ಯ ರಸ್ತೆಯಿಂದ ಬೈಪಾಸ್ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಮರ ಬಿದ್ದು, ಸಂಚಾರ ಸ್ಥಗಿತವಾಗಿದೆ. ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದ್ದು, ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದೆ. 
 ತಾಲೂಕಿನ ಬಹುತೇಕ ಭಾಗಕ್ಕೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಮೆಸ್ಕಾಂ ಸಿಬ್ಬಂದಿ ಯಶಸ್ವಿಯಾಗಿದ್ದು, ಇನ್ನೂ ಹಲವಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಗುಡ್ಡಗಾಡು ಪ್ರದೇಶದಲ್ಲಿ ಮುರಿದು ಬಿದ್ದರುವ ಕಂಬ ಸರಿಪಡಿಸುವುದಕ್ಕೆ ಅಡಚಣೆಯಾಗಿದ್ದು, ಹಂತ ಹಂತವಾಗಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.