ಅಜ್ಜಂಪುರದ ಗೊಂಡೇದಹಳ್ಳಿ ನಡೆಯಲಿರುವ ಶಿವರಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತ್ಯುತ್ಸವ ಮತ್ತು ಧಾರ್ಮಿಕ ಸಮಾವೇಶದ ಆಹ್ವಾನ ಪತ್ರಿಕೆಯನ್ನು ಸಮಿತಿ ಅಧ್ಯಕ್ಷ ಜಿ.ಪಿ.ಜಯಪ್ರಸಾದ್ ಬಿಡುಗಡೆಗೊಳಿಸಿದರು. ಎಚ್.ಸಿ.ರೇವಣಸಿದ್ದಪ್ಪ, ಜಿ.ಮುರುಗೇಶ್, ಜಿ.ಎಚ್.ಗಿರೀಶ್, ಶಿವಪ್ಪ, ಜಿ.ಬಿ.ದಕ್ಷಿಣಮೂರ್ತಿ ಇತರರಿದ್ದರು.  
ಚಿಕ್ಕಮಗಳೂರು

ಮೇ9 ಕ್ಕೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ

ಜಿ. ಗಜೇಂದ್ರ
ತರೀಕೆರೆ: ಅಜ್ಜಂಪುರ ತಾಲೂಕಿನ ಗೊಂಡೇದಹಳ್ಳಿ ಗ್ರಾಮದಲ್ಲಿ ಮೇ 9 ಮತ್ತು 10ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತ್ಯುತ್ಸವ ಹಾಗೂ ಧಾರ್ಮಿಕ ಸಮಾವೇಶ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜನಾ ಸಮಿತಿ ಅಧ್ಯಕ್ಷ ಜಿ.ಪಿ.ಜಯಪ್ರಸಾದ್ ತಿಳಿಸಿದರು.
ಅಜ್ಜಂಪುರ ಪಟ್ಟಣದಲ್ಲಿ ಶಿವರಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತ್ಯುತ್ಸವ ಮತ್ತು ಧಾರ್ಮಿಕ ಸಮಾವೇಶದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಗೊಂಡೇದಹಳ್ಳಿಯಲ್ಲಿ ಆಯೋಜಿಸಲಾಗುತ್ತಿರುವ ಕಾರ್ಯಕ್ರಮ ಯಶಸ್ವಿಗೊಳಿಸಲು ಸಮಿತಿ ಅವಿರತ ಶ್ರಮ ವಹಿಸುತ್ತಿದೆ. ಮೇ 9ರ ಮಧ್ಯಾಹ್ನ 3ಕ್ಕೆ ಹೊಳೆ ಪೂಜೆ ಮತ್ತು ಉತ್ಸವದೊಂದಿಗೆ ಜಯಂತ್ಯುತ್ಸವ ಹಾಗೂ ಧಾರ್ಮಿಕ ಸಮಾವೇಶಕ್ಕೆ ಚಾಲನೆ ಸಿಗಲಿದೆ ಎಂದರು.
ಅಂದು ಸಂಜೆ 5ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಯಡಿಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ತಾವರೆಕೆರೆ ಶೀಲಾಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮೇ 10ರ ಬೆಳಗ್ಗೆ 10.30 ರಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿ ಮತ್ತು ಧಾರ್ಮಿಕ ಸಮಾವೇಶ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗಿರಿಯಾಪುರ ಬಡಗನಾಡು ಶ್ರೀ ಹೇಮರೆಡ್ಡಿ ವೀರಶೈವ ಜನಾಂಗ ಸಂಘದ ಕೇಂದ್ರ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ, ಗೌರವಾಧ್ಯಕ್ಷ ಜಿ.ಮುರುಗೇಶ್, ಉಪಾಧ್ಯಕ್ಷ ಜಿ.ಎಚ್.ಗಿರೀಶ್, ಮಲ್ಲಮ್ಮ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವ ಸಮಿತಿ ಉಪಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಜಿ.ಬಿ.ದಕ್ಷಿಣಮೂರ್ತಿ, ಪ್ರಮುಖರಾದ ನೀಲಕಂಠಪ್ಪ, ತಿಪ್ಪೇಸ್ವಾಮಿ, ಶಶಿಕುಮಾರ್, ಕುಮಾರಸ್ವಾಮಿ, ಜಿ.ಎಂ.ಹೇಮರೆಡ್ಡಿ, ಚಂದ್ರಮೌಳಿ, ಮೋಹನ್‌ಕುಮಾರ್ ಮತ್ತಿತರರಿದ್ದರು.