ಮೂಡಿಗೆರೆ ತಾಲೂಕಿನ ಹಳಿಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ರೋಟರಿಯಿಂದ ಗಿಡ ನೆಡಲಾಯಿತು. ಆದರ್ಶ, ಬಿ.ಕೆ.ದಿನೇಶ್, ಸಂತೋಷ್, ಪ್ರಸಾದ್, ಸಂದೀಪ್, ಸುಭಾಷ್ ಇತರರಿದ್ದರು.
- ಅರಣ್ಯ ನಾಶಮಾಡುವುದರಿಂದ
- ಅಸಮತೋಲನವಾಗುತ್ತಿದೆ
ಮೂಡಿಗೆರೆ: ಪ್ರಕೃತಿ ನಾಶವಾದರೆ ಯುವ ಜನಾಂಗ ದೊಡ್ಡ ಸಮಸ್ಯೆ ಎದರಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಪರಿಸರ ಉಳಿಸಲು ಪ್ರಯತ್ನಿಸಬೇಕು ಎಂದು ರೋಟರಿ ಜೋನಲ್ ಲೆಫ್ಟಿನೆಂಟ್ ಆದರ್ಶ ಹೇಳಿದರು.
ಹಳಿಕೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿಯಿಂದ ನಡೆದ ವನಮಹೋತ್ಸವದಲ್ಲಿ ಮಾತನಾಡಿ, ಉತ್ತಮ ಪರಿಸರವಿದ್ದರೆ ಮಾತ್ರ ಎಲ್ಲ ಜೀವ ಸಂಕುಲಗಳು ಬದುಕಲು ಸಾಧ್ಯವಾಗುತ್ತದೆ. ಮಾನವ ಸ್ವಾರ್ಥಕ್ಕಾಗಿ ಮರಗಳನ್ನು ಕಡಿದು ಅರಣ್ಯ ನಾಶಮಾಡುವುದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ. ಪರಿಸರ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಒಂದು ಮರ ಕಡಿದರೆ ಕನಿಷ್ಠ ಎರಡು ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಜತೆಗೆ ಯುವ ಜನತೆಗೆ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಸಬೇಕಿದೆ ಎಂದು ಹೇಳಿದರು.
ರೋಟರಿ ಅಧ್ಯಕ್ಷ ಬಿ.ಕೆ.ದಿನೇಶ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳಾಗುವ ಜತೆಗೆ ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣವಾಗಬೇಕೆಂದು ತಿಳಿಸಿದರು.
ರೋಟರಿ ಕಾರ್ಯದರ್ಶಿ ಸಂತೋಷ್, ನಿಕಟಪೂರ್ವ ಅಧ್ಯಕ್ಷ ಪ್ರಸಾದ್, ಸಂದೀಪ್, ಸುಭಾಷ್, ಅವಿನ್, ಸುನಿಲ್, ಶಾಲೆ ಮುಖ್ಯಶಿಕ್ಷಕ ಮಂಜು ನಾಯ್ಕ, ರೇಣುಕಮ್ಮ ಇತರರಿದ್ದರು.