ಚಿಕ್ಕಮಗಳೂರಿನ ಶಾರದ ಪೈ ಕಲ್ಯಾಣ ಮಂಟಪದಲ್ಲಿ ಕಾಶಿ ಮಠದ ವಾರಣಾಸಿ ಅಧೀನ ಸಂಸ್ಥೆ ವತಿಯಿಂದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ಮಂಗಳೂರಿನ ಉಪೇಂದ್ರ ಮಲ್ಯ ಮತ್ತು ಸಂಗಡಿಗರಿAದ ಶ್ರೀನಿವಾಸ ಕಲ್ಯಾಣ ನೃತ್ಯರೂಪಕ ನಡೆಯಿತು.
ಚಿಕ್ಕಮಗಳೂರು: ಗುರುಪೂರ್ಣಿಮೆಯು ನಮ್ಮ ಜೀವನದ ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ತೋರುವ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಅತ್ಯಂತ ಪವಿತ್ರ ದಿನವಾಗಿದೆ ಎಂದು ಶಾರದ ಪೈ ಕಲ್ಯಾಣ ಮಂಟಪದ ಟ್ರಸ್ಟ್ನ ಅಧ್ಯಕ್ಷ ಜಯಂತ್ ಪೈ ಪ್ರಭು ತಿಳಿಸಿದರು.
ನಗರದ ಶಾರದ ಪೈ ಕಲ್ಯಾಣ ಮಂಟಪದಲ್ಲಿ ಕಾಶಿ ಮಠದ ವಾರಣಾಸಿ ಅಧೀನ ಸಂಸ್ಥೆ ವತಿಯಿಂದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ಅಕ್ಷರವ ಕಲಿಸಿದ ಗುರುಗಳು, ಅರಿವನ್ನು ಮೂಡಿಸಿದ ಹೆತ್ತವರು, ಗುರಿಯನ್ನು ಮುಟ್ಟಿಸಿದ ಜೊತೆಗಾರರೆಲ್ಲ ಬದುಕಿನ ಪ್ರಧಾನ ಗುರುಗಳು. ಅಂಥ ಗುರುಗಳನ್ನು ಭಕ್ತಿ ಕೃತಜ್ಞತೆಯಿಂದ ಸ್ಮರಿಸಿ ಪೂಜಿಸುವ ಕಾರ್ಯಕ್ರಮವೇ ಗುರುಪೂರ್ಣಿಮೆ ಆಗಿದೆ ಎಂದು ಹೇಳಿದರು.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಗುರುಗಳು ಜೀವನದ ಕತ್ತಲನ್ನು ದೂರಮಾಡಿ ಬೆಳಕಿನೆಡೆಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ. ವಿದ್ಯಾರ್ಥಿಗಳು ಗುರುಗಳ ಮತ್ತು ಪಾಲಕರ ಮಾರ್ಗದರ್ಶನದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಉನ್ನತ ವ್ಯಾಸಂಗ ಮಾಡಿ ಸಮಾಜಸೇವೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿ ಸಾರ್ಥಕ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.
೨೫ ವರ್ಷಗಳಿಂದ ಗುರುಪೂರ್ಣಿಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ. ನಮ್ಮ ಸಮಾಜದ ವಿದ್ಯಾರ್ಥಿ ಶ್ರೇಷ್ಠಾ ಕಾಮತ್ ದ್ವಿತಿಯ ಪಿಯುಸಿಯಲ್ಲಿ ಶೇ. ೯೮, ಸಿಇಟಿಯಲ್ಲಿ ೨೦೦ನೇ ರ‍್ಯಾಂಕ್, ನೀಟ್‌ನಲ್ಲಿ ರ‍್ಯಾಂಕ್ ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸಮಾಜಕ್ಕೂ ಹಾಗೂ ಜಿಲ್ಲೆಗೂ ಕೀರ್ತಿ ತಂದುಕೊಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ನಿವೃತ್ ಇಂಜಿನಿಯರ್ ನಾರಾಯಣ ಮಲ್ಯ ಮಾತನಾಡಿ, ಆಷಾಡ ಶುಕ್ಲ ಹುಣ್ಣಿಮೆಯಂದು ಗುರುಪೂರ್ಣಿಮೆ ಆಚರಿಸಲಾಗುತ್ತದೆ. ಆಷಾಡ, ಕಾರ್ತಿಕ, ಮಾಗ, ವೈಶಾಖದಲ್ಲಿ ಬರುವ ನಾಲ್ಕು ಗುರುಪೂರ್ಣಿಮೆ ಯಲ್ಲಿ ಈ ದಿನ ವಿಶೇಷವಾಗಿದೆ. ಗಣಪತಿ ಹೋಮ, ಪೂರ್ಣಾಹುತಿ, ಸತ್ಯನಾರಾಯಣ ವ್ರತ ಮತ್ತು ಕಥಾಶ್ರವಣ ನಡೆದ ಬಳಿಕ ಗುರು ಪೂಜೆ, ಪಾದುಕ ಪೂಜೆ, ಗುರುಕಾಣಿಕೆಯೊಂದಿಗೆ ಮಹಾ ಮಂಗಳಾರತಿಯೊAದಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿ ಶ್ರೇಷ್ಠಾ ಕಾಮತ್ ಮಾತನಾಡಿ, ಪಾಲಕರು ಹಾಗೂ ಉಪನ್ಯಾಸಕರ ಪ್ರೋತ್ಸಾಹದಿಂದ ಪ್ರಥಮ ಸ್ಥಾನಗಳಿಸಲು ಸಹಾಯವಾಗಿದ್ದು, ಗುರುಪೂರ್ಣಿಮೆ ವಿಶೇಷ ದಿನದಂದು ನನಗೆ ಸನ್ಮಾನಿಸಿ ಗೌರವ ನೀಡಿರುವುದು ಸಂತೋಷವಾಗಿದೆ. ಈ ರೀತಿ ವಿದ್ಯಾಥಿಗಳನ್ನು ಗುರುತಿಸಿ ಗೌರವಿಸುವುದರಿಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದರು. ರಮೇಶ್ ಪೈ ದಂಪತಿಗಳು ಪೂಜೆಯಲ್ಲಿ ಭಾಗವಹಿಸಿದರು.
ದಾಮೋದರ್ ಪ್ರಭು ಸ್ವಾಗತಿಸಿ, ಲಕ್ಷö್ಮಣ್ ಕಾಮತ್ ವಂದಿಸಿದರು. ಕಾರ್ಯಕ್ರಮದ ನಂತರ ಮಂಗಳೂರಿನ ಉಪೇಂದ್ರ ಮಲ್ಯ ಮತ್ತು ಸಂಗಡಿಗರಿAದ ಶ್ರೀನಿವಾಸ ಕಲ್ಯಾಣ ನೃತ್ಯರೂಪಕ ಮಾಡಿದರು.