ಕಳಸ: ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಅ.11 ರಿಂದ 24ರ ವರೆಗೆ ಲೋಕ ಕಲ್ಯಾಣಾರ್ಥ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶರನ್ನವರಾತ್ರಾ ಮಹೋತ್ಸವ, ಶ್ರೀಮನ್ ಮಹಾ ಚಂಡಿಕಾ ಹೋಮ,ಪಟ್ಟಾಭಿಷೇಕೋತ್ಸವ ಹಾಗೂ ಜೀವ-ಭಾವ ಕಾರ್ಯಕ್ರಮದಲ್ಲಿ ಶ್ರೀಮಾತಾ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕ್ಷೇತ್ರದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಅ.11ರಿಂದ 24 ರವರೆಗೆ ಅನ್ನಪೂರ್ಣೇಶ್ವರಿಗೆ ವಿವಿಧ ಅಲಂಕಾರ ಸೇವೆ, ಹೋಮ ನಡೆಯಲಿದೆ. ಹಾಗೂ ಪ್ರತಿ ದಿನ ಸಪ್ತಶತಿ ಪಾರಾಯಣ, ನಾಲ್ಕು ವೇದಗಳ ಪಾರಾಯಣ, ಸುಂದರಕಾಂಡ ಪಾರಾಯಣ, ಶ್ರೀ ದೇವೀ ಭಾಗವತಾ ಪಾರಾಯಣ, ಕುಂಕುಮಾರ್ಚನೆ, ಮಹಾಭಾರತ ಕಾವ್ಯವಾಚನ, ನಾದಸ್ವರ ವಾದನ, ಶ್ರೀದೇವಿ ಮಹಾತ್ಮೇ ಪುರಾಣ ಪ್ರವಚನ, ಶ್ರೀ ಮಾತೆಗೆ ರಥೋತ್ಸವ ಸೇವೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ, ಹರಿಕಥೆ, ಭರತನಾಟ್ಯ, ಭಕ್ತಿ ಸಂಗೀತ, ಶಾಸಿಯ ಸಂಗೀತ, ಕರ್ನಾಟಕ ಶಾಸಿಯ ಸಂಗೀತ, ಸನಾತನಿ ನೃತ್ಯ ರೂಪಕ, ಯಕ್ಷಗಾನ, ನೃತ್ಯ ಸಂಗಮ, ಮೆಲೋಡಿಕ್ ವೈಭವ್-ಗಿಟಾರ್ ಮತ್ತು ವಯೋಲಿನ್ ವೈವಿಧ್ಯತೆ, ದಾಸವಾಣಿ ಭಕ್ತಿಗಾಯನ ನಡೆಯಲಿದೆ.
ಅ.23 ರಂದು ಅಭಿಷೇಕ ಸಹಿತ ಪೂಜೆ ಲೋಕ ಕಲ್ಯಾಣಾರ್ಥ ಶ್ರೀಮನ್ ಮಹಾಚಂಡಿಕಾ ಹೋಮ. ಆ 24ರಂದು ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ಅಭಿಷೇಕ ಮತ್ತು ವಿಶೇಷ ಪೂಜೆ, ನವಗ್ರಹ ಹೋಮ, ಜೀವ-ಭಾವ ಯೋಜನೆ ಕಾರ್ಯಕ್ರಮದಲ್ಲಿ ಶ್ರೀಮಾತಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಅಂದು ಶ್ರೀವಿದ್ಯೇಶತೀರ್ಥ ಶ್ರೀಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.