ಕಡೂರು ಪಟ್ಟಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ) 
ಚಿಕ್ಕಮಗಳೂರು

ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳ ಪಾರಮ್ಯ

ಕಡೂರು: ಈ ಬಾರಿಯ ಕಡೂರು ವಲಯದ ವ್ಯಾಪ್ತಿಯ ಶಾಲೆಗಳ ಎಸ್‌ಎಸ್‌ಎಲ್‌ಸಿ  ಲಿತಾಂಶದಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಪಾರಮ್ಯ ಮೆರಿದಿವೆ. ವಸತಿ ಶಾಲೆಗಳು ಶೇ.100 ರಷ್ಟು ಲಿತಾಂಶ ಪಡೆದರೆ, ಖಾಸಗಿ ಮತ್ತು ಅನುದಾನಿತ ಶಾಲೆಗಳ ಒಳಗೊಂಡ ಶೇಕಡವಾರು ಸರಾಸರಿ ಲಿತಾಂಶದಲ್ಲಿ ಕಳೆದ ಬಾರಿಗಿಂತ ಶೇ.23ರಷ್ಟು ಸುಧಾರಣೆ ಕಂಡಿದೆ.
ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಬರೆದ 2,281 ಮಕ್ಕಳಲ್ಲಿ 754 ವಿದ್ಯಾರ್ಥಿಗಳು ೇಲ್ ಆಗಿದ್ದರು. 210 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಗೈರಾಗಿದ್ದರು. ಒಟ್ಟು  964 ವಿದ್ಯಾರ್ಥಿಗಳು ಓದಿನಲ್ಲಿ ನಿರಾಸಕ್ತಿ ಬೆಳೆಸಿಕೊಂಡ ಪರಿಣಾಮ ಶೇ.66.94 ಕಳಪೆ ಲಿತಾಂಶ ದಾಖಲಾಗಿತ್ತು.
ಆದರೆ ಈ ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕ ವಲಯ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಕಾಳಜಿವಹಿಸಿದ ಪರಿಣಾಮ ಈ ಬಾರಿ ಸಮಾಧಾನಕರ ಲಿತಾಂಶ ದಾಖಲಾಗಿದೆ. ಒಟ್ಟಾರೆ ಕಡೂರು ಶೈಕ್ಷಣಿಕ ವಲಯದಲ್ಲಿ ಮುರಾರ್ಜಿ ವಸತಿ ಶಾಲೆಗಳು (ಶೇ.100) ಸರ್ಕಾರಿ ಶಾಲೆಗಳು (ಶೇ.93.93), ಖಾಸಗಿ ಶಾಲೆಗಳು (ಶೇ.92.61), ಅನುದಾನಿತ ಶಾಲೆಗಳು (ಶೇ.84.64) ಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದ 2,229 ವಿದ್ಯಾರ್ಥಿಗಳಲ್ಲಿ 2017 ವಿದ್ಯಾರ್ಥಿಗಳು ಪರೀಕ್ಷೆ-1ರಲ್ಲಿ ಉತ್ತೀರ್ಣಗೊಂಡಿದ್ದಾರೆ. ಆದರೂ 212 ವಿದ್ಯಾರ್ಥಿಗಳ ಪೈಕಿ 50 ವಿದ್ಯಾರ್ಥಿಗಳು ಗೈರು ಹಾಜರಾದರೆ ಉಳಿದ 162 ಜನ ವಿದ್ಯಾರ್ಥಿಗಳು ವಿವಿಧ ವಿಷಯಗಳವಾರು ಅಂಕಗಳಿಕೆಯಲ್ಲಿ ವಿಲರಾಗಿ ಅನುತ್ತೀರ್ಣಗೊಂಡಿದ್ದರಿಂದ ಕಡೂರು ಶೈಕ್ಷಣಿಕ ವಲಯವು ತಾಲೂಕುವಾರು ಶೈಕ್ಷಣಿಕ ವಲಯಗಳ ಸಾಧನೆಯಲ್ಲಿ ಶೇ.90.48 ಲಿತಾಂಶದೊಂದಿಗೆ ಮತ್ತೊಮ್ಮೆ ಜಿಲ್ಲೆಗೆ ಕೊನೆ ಸ್ಥಾನಕ್ಕೆ ತಳಲ್ಪಟ್ಟಿದೆ.