ಶೃಂಗೇರಿಯ ವಿದ್ಯಾನಗರದಲ್ಲಿ ಕೆಪಿಎಸ್ ಶಾಲೆಯನ್ನು ಶಾಸಕ ಟಿ.ಡಿ ರಾಜೇಗೌಡ ಉದ್ಘಾಟಿಸಿದರು. ವಿಜಯಕುಮಾರ್, ಮಹಾಬಲ, ಶಿವಮೂರ್ತಿ,ತ್ರಿವೇಣಿ ಇದ್ದರು. 
ಚಿಕ್ಕಮಗಳೂರು

ಶಿಕ್ಷಣದ ಜತೆಗೆ ಕಲೆ, ಸಾಹಿತ್ಯಕ್ಕೂ ಅದ್ಯತೆ ನೀಡಿ

ಶೃಂಗೇರಿ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮೌಲ್ಯಗಳ ಅರಿವು ನೀಡಬೇಕು. ಆಗ ಮಾತ್ರ ಅವರ ಅಂತರಂಗದ ಸಾಮರ್ಥ್ಯದ ಜತೆಗೆ ಮನೋವಿಕಾಸ ಬೆಳವಣಿಗೆ ಕಾಣಲು ಸಾಧ್ಯ. ವಿದ್ಯಾರ್ಥಿಗಳು ತಾವು ಇರುವ ಕಾಲಘಟ್ಟವನ್ನು ಅರಿತು ಜೀವನದಲ್ಲಿ ಮುನ್ನಡೆಯುವ ಅಗತ್ಯವಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಶೃಂಗೇರಿ ವಿದ್ಯಾನಗರದಲ್ಲಿ ಕೆಪಿಎಸ್ ಶಾಲೆ ಉದ್ಘಾಟಿಸಿ ಮಾತನಾಡಿ, ಸರ್ಕಾರ ಶಿಕ್ಷಣ ಇಲಾಖೆಗೆ ಹೆಚ್ಚಿನ ಸೌಲಭ್ಯ ನೀಡುತ್ತೀದೆ. ಸರ್ಕಾರಿ ಶಾಲೆಗಳು ಬೆಳೆಯಬೇಕು ಪ್ರಸ್ತುತ ಸರ್ಕಾರ ಎಲ್‌ಕೆಜಿಯಿಂದ ದ್ವೀತಿಯ ಪಿಯುಸಿವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿರುವ ಸೌಲಭ್ಯಕ್ಕೂ ಮೀರಿ ಸರ್ಕಾರಿ ಕೆಪಿಎಸ್ ಶಾಲೆಗಳಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಕ್ರಿಯಾಶೀಲತೆಗೆ ಪ್ರೋತ್ಸಾಹ ನೀಡುವುದು ಪಾಲಕರ ಹಾಗೂ ಶಿಕ್ಷಕರ ಜವಾಬ್ದಾರಿ. ಮಕ್ಕಳು ದೇಶದ ಮುಂದಿನ ಪ್ರಜೆಗಳು. ಸಾಂಸ್ಕೃತಿಕ ವೇದಿಕೆಗಳು ಅವರಲ್ಲಿ ಸಮನ್ವಯತೆ, ಸಾಂಕ ಮನೋಭಾವ ಬೆಳೆಯಲು ಪೂರಕ ವಾತಾವರಣ ಕಲ್ಪಿಸುತ್ತದೆ. ಯುವಜನತೆ ಪ್ರಸ್ತುತ ಸಾಮಾಜಿಕ ಜಾಲ ತಾಣಗಳಲ್ಲಿ ಮೈ ಮರೆತಿದ್ದಾರೆ. ಸಂಬಂಧಗಳು ಪರಸ್ಪರ ನಾಶವಾಗುತ್ತಿದೆ. ದೇಶ ಪ್ರೇಮ ಮತ್ತು ವಿಶಾಲ ಮನೋಭಾವ ಕಡಿಮೆಯಾಗುತ್ತಿದೆ. ಯುವ ಜನಾಂಗದವರಲ್ಲಿ ಇರುವ ಬುದ್ಧಿ ಶಕ್ತಿಯನ್ನು ಸಮರ್ಥವಾಗಿ ಬಳಸಿಕೋಳ್ಳಬೇಕು ಎಂದರು.
ಕೆಪಿಎಸ್ ಶಾಲೆ ಪ್ರಾಚಾರ್ಯ ಅರುಣ್ ಕುಮಾರ್, ಬಿಇಒ ವರಲಕ್ಷ್ಮೀ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶಾರದಾ, ಪಿಎಸಿಎಸ್ ಅಧ್ಯಕ್ಷ ರಮೇಶ್‌ಭಟ್, ಕಾಂಗ್ರೆಸ್ ವಕ್ತಾರ ಉಮೇಶ್ ಪೊದುವಾಳ್, ಪಿಸಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿನೇಶ್‌ಹೆಗ್ಡೆ, ಮೆಣಸೆ ಗ್ರಾಪಂ ಮಾಜಿ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ವಿದ್ಯಾನಗರ ಶಾಲೆ ಮುಖ್ಯಶಿಕ್ಷಕಿ ಮೈತ್ರಿ ಉಪಸ್ಥಿತರಿದ್ದರು.