ಕಂಸಾಗರ ಸೋಮಶೇಖರ್ 
ಚಿಕ್ಕಮಗಳೂರು

ಗಾಯತ್ರಿ ಶಾಂತೇಗೌಡರ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ

ಕಡೂರು: ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಗಾಯತ್ರಿ ಶಾಂತೇಗೌಡರ ಆಯ್ಕೆ ಮಾನ್ಯಮಾಡಿರುವ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕವಾಗಿ ಪ್ರಜಾಪ್ರಭುತ್ವಕ್ಕೆ ದೊರೆತ ಜಯ ಎಂದು ಸರಸ್ವತೀಪುರ ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್ ಹೇಳಿದರು.
2021ರಲ್ಲಿ ನಡೆದ ವಿಧಾನ ಪರಿಷ್‌ತ್ ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ ರಮೇಶ್ ಅವರು 12 ನಾಮ ನಿರ್ದೇಶಿತ ಸದಸ್ಯರ ಮತಗಳನ್ನು ಪರಿಗಣಿಸಿ ಎಂ.ಕೆ.ಪ್ರಾಣೇಶ್ ಅವರ ಆಯ್ಕೆ ಘೋಷಿಸಿದ್ದರು. ಬಳಿಕ ಎಂ.ಕೆ.ಪ್ರಾಣೇಶ್ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಗಾಯತ್ರಿ ಶಾಂತೇಗೌಡ ಜತೆ ಸೇರಿ ನಾನು ಸೇರಿದಂತೆ ಪ್ರಶಾಂತ್ ಶೆಟ್ಟಿ, ರಶೀದ್, ಹಿರೇಗೌಜದ ಗುರುಮೂರ್ತಿ, ಮೂಡಿಗೆರೆ ವೆಂಕಟೇಶ್ ಮೇಲ್ಮನವಿ ಸಲ್ಲಿಸಲಾಗಿತ್ತು. ಹೈಕೋರ್ಟ್ ನಾಮ ನಿರ್ದೇಶಿತ ಸದಸ್ಯರ ಮತ ಹೊರತು ಪಡಿಸಿಮರುಮತ ಎಣಿಕೆಗೆ ಆದೇಶಿಸಿತ್ತು. ನಂತರ ನಡೆದ ಕಾನೂನು ಸಮರದಲ್ಲಿ ಪ್ರಾಣೇಶ್ ಅವರ ಅರ್ಜಿಯನ್ನು ಸುಪ್ರಿಂ ಕೋರ್ಟ್ ವಜಾಗೊಳಿಸಿರುವ ಹಿನ್ನಲೆಯಲ್ಲಿ ಗಾಯಿತ್ರಿ ಶಾಂತೇಗೌಡರ ಆಯ್ಕೆ ಸಿಂಧುವಾಗಿರುವುದು ಸತ್ಯ ಮತ್ತು ನ್ಯಾಯಕ್ಕೆ ಸಂದ ಜಯ ಎಂದು ತಿಳಿಸಿದರು.
ಪ್ರಕರಣದ ತೀರ್ಪಿನಿಂದ ಗಾಯತ್ರಿ ಶಾಂತೇಗೌಡ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಉತ್ಸಾಹ ಮೂಡಿಸಿದೆ. ಆದರೆ ಕಳೆದ ನಾಲ್ಕೂವರೆ ವರ್ಷದ ಕಾನೂನು ಹೋರಾಟದಲ್ಲಿ ಗಾಯತ್ರಿ ಶಾಂತೇಗೌಡರು ವಿಧಾನಪರಿಷತ್ ಸದಸ್ಯತ್ವ ಸ್ಥಾನದಿಂದ ವಂಚಿತರಾಗಿದ್ದರು. ಇಂತಹ ಸೂಕ್ಷ್ಮ ಪ್ರಕರಣಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತ್ವರಿತವಾಗಿ ವಿಚಾರಣೆ ನಡೆದು ತೀರ್ಪು ನೀಡಿದರೆ ನೈಜವಾಗಿ ಜಯಗಳಿಸಿದ ಅಭ್ಯರ್ಥಿಗೆ ಅನ್ಯಾಯವಾಗುವುದು ತಪ್ಪಲಿದೆ ಎಂದರು.
ಮುಖಂಡರಾದ ಕರಿಬಡ್ಡೆ ರಾಜು, ನಾಗೇಂದ್ರ ಮೀಸೆ ಕೃಷ್ಣಪ್ಪ, ಪರಮೇಶಪ್ಪ, ಗಿರೀಶ್, ರಂಗಸ್ವಾಮಿ, ಬಸವರಾಜ್, ಪುಟ್ಟೆಗೌಡ ಇದ್ದರು.