ಆಲ್ದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂತ್ರಿಮಂಡಲ ರಚನೆ ನಡೆಯಿತು. ಕಮಲಾಕ್ಷಿ, ಗೀತಾ, ಸುನೀತಾ, ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.
ಆಲ್ದೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಮಂತ್ರಿಮಂಡಲ ರಚನೆ ನಡೆಯಿತು. ಮಂತ್ರಿಮಂಡಲ ಆಯ್ಕೆಯಲ್ಲಿ ಆಧಾರ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದು ವಿದ್ಯಾರ್ಥಿಗಳು ಮತ ಚಲಾವಣೆ ಮಾಡಿದರು.
ಮೊಬೈಲ್‌ನಲ್ಲಿ ಇವಿಎಂ ಆ್ಯಪ್ ಡೌನ್‌ಲೋಡ್ ಮಾಡಿ ಮತ ಚಲಾವಣೆಗೆ ಅವಕಾಶ ಮಾಡಿದ್ದರು. 10 ವಿದ್ಯಾರ್ಥಿಗಳು ಆಯ್ಕೆಯಾದರು. ಮುಖ್ಯಮಂತ್ರಿಯಾಗಿ ರಾಘವ, ಉಪಮುಖ್ಯಮಂತ್ರಿ ಸಮರ್ಥ್, ವಿಪಕ್ಷದ ನಾಯಕ ಅಕ್ಷಯ್, ಸ್ವಚ್ಛತಾ ಮಂತ್ರಿಯಾಗಿ ಅರ್ಜುನ್, ಶಿಕ್ಷಣ ಮಂತ್ರಿ ದೀಪಿಕಾ, ಆರೋಗ್ಯ ಮಂತ್ರಿ ಕಿಶೋರ್, ಕ್ರೀಡಾ ಮಂತ್ರಿ ಅನ್ವಿತ್, ವಾರ್ತಾ ಮಂತ್ರಿ ಬಿಂದು, ತೋಟಗಾರಿಕೆ, ನೀರಾವರಿ ಮಂತ್ರಿ ಖುಷಿ, ಗ್ರಂಥಾಲಯ ಮಂತ್ರಿಯಾಗಿ ಸುಚಿತ್ರಾ ಆಯ್ಕೆಯಾದರು. ಮುಖ್ಯಶಿಕ್ಷಕಿ ಕಮಲಾಕ್ಷಿ, ಸುನೀತಾ, ಲಲಿತಾ, ಗೀತಾ, ಅತಿಥಿ ಶಿಕ್ಷಕಿ ತ್ರಿವೇಣಿ ಹಾಗೂ ಮಕ್ಕಳಿದ್ದರು.