ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿರುವ ಸಿಕ್ಕ ಒಂಟಿ ಕಣ್ಣಿನ ಕಾಡುಕೋಣ.
ಆಲ್ದೂರು: ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ಒಂಟಿ ಕಾಡುಕೋಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಮೊದಲ ಬಾರಿಗೆ ಸರ್ಕಾರ ಕಾಡಿನಿಂದ ನಾಡಿನತ್ತ ಬರುತ್ತಿರುವ ಕಾಡುಕೋಣಗಳ ಸೆರೆಗೆ ಅನುಮತಿ ನೀಡಿದ್ದು, ಕಾಡುಕೋಣ ಸೆರೆಗೆ ಕೊಪ್ಪ ತಾಲೂಕಿನಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು. ಅರೆನೂರು ಗ್ರಾಮದ ಸುತ್ತ ಕಳೆದ ಒಂದು ತಿಂಗಳಿನಿಂದ ಒಂಟಿ ಕಾಡುಕೋಣ ಬೀಡು ಬಿಟ್ಟಿದ್ದು, ಸುತ್ತಲಿನ ಗ್ರಾಮಗಳಲ್ಲಿ ಸಂಚಾರ ಮಾಡುತ್ತಿತ್ತು.ಯಾವುದೇ ಹಾನಿ ಮಾಡಿರಲಿಲ್ಲ. ಕಾಡುಕೋಣ ಸಂಚಾರದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ನಾಗರಹೊಳೆಯ ಬಳ್ಳೆಯಿಂದ ಸಾಕಾನೆ ಮಹೇಂದ್ರನನ್ನು ಕರೆತಂದು ಯಶಸ್ವಿ ಕಾರ್ಯಾಚರಣೆ ನಡೆಸಿ ಕಾಡುಕೋಣವನ್ನು ಸೆರೆಹಿಡಿಯಲಾಗಿದೆ. ಹಕ್ಕಿಮಕ್ಕಿ ಗ್ರಾಮದ ಗೋಪಾಲಗೌಡ ಅವರ ಕಾಫಿ ತೋಟದಲ್ಲಿ ಸೆರೆಹಿಡಿಯಲಾಗಿದೆ. ಸೆರೆ ಹಿಡಿದ ಕಾಡುಕೋಣ ಸುಮಾರು 8 ವರ್ಷದ್ದಾಗಿದ್ದು, ಕಾಡುಕೋಣದ ಒಂದು ಕಣ್ಣಿಗೆ ಹಾನಿಯಾಗಿದೆ.
ಶನಿವಾರ ಮಧ್ಯಾಹ್ನದಿಂದ ಮಳೆಯಾಗುತ್ತಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಮಳೆ ಬಿಡುವುದನ್ನು ಕಾಯುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಕಾರ್ಯಚರಣೆ ಆರಂಭಿಸಿದರು. ಅರವಳಿಕೆ ತಜ್ಞ ರಮೇಶ್‌ಕುಮಾರ್, ಚಟ್ಟಿಯಪ್ಪ, ಕಾಡುಕೋಣಕ್ಕೆ ಅರವಳಿಕೆ ಮದ್ದು ನೀಡಿ ಯಶಸ್ವಿಯಾಗಿ ಕಾಡುಕೋಣವನ್ನು ಸೆರೆ ಹಿಡಿಯಲಾಗಿದೆ. ಇದೇ ಮೊದಲ ಬಾರಿಗೆ ಕಾಡು ಕೋಣವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಇದರಿಂದ ಬಾಳೆಹೊನ್ನೂರು-ಚಿಕ್ಕಮಗಳೂರು ರಾಜ್ಯ ಹೆದ್ದಾರಿ ಒಂದು ಗಂಟೆಗೂ ಹೆಚ್ಚು ಬಂದ್ ಆಗಿತ್ತು.
ಸಿಸಿಎ್ ಯಶ್‌ಪಾಲ್ ಸಿ ಸಾಗರ್, ಡಿಎ್ಒಗಳಾದ ರಮೇಶ್ ಬಾಬು, ಶಿವಶಂಕರ್, ಆಲ್ದೂರು ವಲಯ ಅರಣ್ಯ ಅಧಿಕಾರಿ ಹರೀಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.