ಕೊಟ್ಟಿಗೆಹಾರದ ಕೆ.ಪಿಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪ್ರಕೃತಿ ಅನುಭವ ಚಾರಣ ನಡೆಯಿತು.  
ಚಿಕ್ಕಮಗಳೂರು

ಪ್ರಕೃತಿ ಸಾಗಂತ್ಯದಿಂದ ಜೀವನೋತ್ಸಾಹ ವೃದ್ಧಿ

ಜಿ.ಹೆಚ್. ಧನ್ಯಕುಮಾರ್
ಬಣಕಲ್: ಪ್ರಕೃತಿಯ ಸಾಂಗತ್ಯದಿಂದ ಕಳೆದು ಹೋದ ಜೀವನೋತ್ಸಾಹ ವೃದ್ಧಿಸುತ್ತದೆ ಎಂದು ಹಾಸನ ರೋಟರಿ ಕ್ಲಬ್ ಆ್ ಕ್ವಾಂಟಾ ಅಧ್ಯಕ್ಷ ಡಾ.ಜಿ.ಎಸ್. ಬಸವರಾಜ ಹೇಳಿದರು.
ಹಾಸನದ ರೋಟರಿ ಕ್ಲಬ್ ಆ್ ಕ್ವಾಂಟಾ ಮತ್ತು ಮಿತ್ರಾ ಎನ್ವಿರಾನ್ಮೆಂಟ್ ಅಂಡ್ ವೈಲ್ಡ್ ಲ್ೈ ಸೊಸೈಟಿ ಕೊಟ್ಟಿಗೆಹಾರದ ಕೆ.ಪಿಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ಪ್ರಕೃತಿ ಅನುಭವ ಚಾರಣ ಕಾರ್ಯಕ್ರಮದಲ್ಲಿ ಮಾತನಾಡಿ, ಸತತ ಮೂರು ವರ್ಷಗಳಿಂದ ಈ ಪರಿಸರದಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದು, ಪ್ರತಿ ಬಾರಿಯೂ ಇಲ್ಲಿನ ಪರಿಸರ ಹೊಸ ರೀತಿಯಲ್ಲಿ ತನ್ನ ದರ್ಶನ ಮಾಡಿಸುತ್ತದೆ. ತೇಜಸ್ವಿ ಅವರು ಹೇಳಿರುವಂತೆ ಪ್ರಕೃತಿ ಮನುಷ್ಯನ ಒಂದು ಭಾಗವಲ್ಲ. ಮನುಷ್ಯ ಪ್ರಕೃತಿಯ ಒಂದು ಭಾಗ. ಇದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ ಎಂದರು.
ತೇಜಸ್ವಿ ಒಡನಾಡಿ ಸುರೇಶ್ ಚಂದ್ರ ದತ್ತ ಮಾತನಾಡಿ, ಬಹುಮುಖ ವ್ಯಕ್ತಿತ್ವದ ತೇಜಸ್ವಿ ಅವರ ಆಸಕ್ತಿಗಳು ಹಲವಾರು ಕ್ಷೇತ್ರಗಳಲಿದ್ದವು. ಕೃತಿಯೊಂದರ ಮುಖಪುಟದ ವಿನ್ಯಾಸ, ಚಿತ್ರ ರಚನೆ ಬಗ್ಗೆ ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಹೊಂದಿದ್ದರು ಎಂದರು.
ಕೀಟ ತಜ್ಞ ಡಾ.ಅವಿನಾಶ್ ಉಪನ್ಯಾಸ ನೀಡಿ, ಮಿಂಚುಹುಳುಗಳ ಆವಾಸಸ್ಥಾನಗಳ ಮೇಲೆ ಪರಿಸರ ಬದಲಾವಣೆಗಳಿಂದ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಿಂಹ, ಹುಲಿ, ಚಿರತೆಗಳಂಥ ದೊಡ್ಡ ಪ್ರಾಣಿಗಳ ಜತೆಗೆ ಮಿಂಚುಹುಳು ಸೇರಿದಂತೆ ಕೀಟಸಮೂಹಗಳು ಮುಖ್ಯವಾಗಿವೆ ಎಂದರು.
ಕಾರ್ಯಕ್ರಮದ ನಂತರ ಮಿತ್ರಾ ಎನ್ವಿರಾನ್ಮೆಂಟ್ ಅಂಡ್ ವೈಲ್ಡ್ ಲ್ೈ ಸೊಸೈಟಿಯಿಂದ ತೇಜಸ್ವಿ ಪ್ರತಿಷ್ಠಾನದ ಚಿಟ್ಟೆ ಉದ್ಯಾನವನಕ್ಕೆ ಗಿಡಗಳನ್ನು ಕೊಡುಗೆಯಾಗಿ ನೀಡಲಾಯಿತು. ರಾಣಿಝರಿ ಮತ್ತು ಜಾವಳಿ ಹೇಮಾವತಿ ನದಿಮೂಲಕ್ಕೆ ಚಾರಣ ಕಾರ್ಯಕ್ರಮ ನಡೆಯಿತು. ಆಲೇಕಾನ್ ಗ್ರಾಮದಲ್ಲಿ ಜೇನುಕೃಷಿಕ ಸುರೇಶ್ ಜೇನು ಸಾಕಾಣಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಮಿತ್ರಾ ಎನ್ವಿರಾನ್ಮೆಂಟ್ ಅಂಡ್ ವೈಲ್ಡ್ ಲ್ೈ ಸೊಸೈಟಿ ಕಾರ್ಯದರ್ಶಿ ಮಂಜುನಾಥ್, ರೋಟರಿ ಕ್ಲಬ್ ಆ್ ಕ್ವಾಂಟಾದ ಕಾರ್ಯದರ್ಶಿ ಕೆ.ಎಲ್.ಯತೀಶ್ ಖಜಾಂಚಿ ಡಾ.ಹೇಮಂತ್ ಕುಮಾರ್ ಡಿ. ರಮ್ಯಾ ಮಂಜುನಾಥ್, ಶಿಕ್ಷಕ ಪೂರ್ಣೇಶ್ ಮತ್ತಾವರ, ಪ್ರಜ್ವಲ್ ಇದ್ದರು.