ತರೀಕೆರೆ ಕಸಬಾ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬೇಕಾಬಿಟ್ಟಿ ತ್ರೀಫೇಸ್ ವಿದ್ಯುತ್ ಕಡಿತಗೊಳಿಸುತ್ತಿರುವುದನ್ನು ಖಂಡಿಸಿ ಅಡಿಕೆ ಮತ್ತು ವೀಳ್ಯದೆಲೆ ಬೆಳೆಗಾರರು ತರೀಕೆರೆ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
ಚಿಕ್ಕಮಗಳೂರು

ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಿ pumpsets

ತರೀಕೆರೆ: ಕಸಬಾ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬೇಕಾಬಿಟ್ಟಿ ತ್ರೀಫೇಸ್ ವಿದ್ಯುತ್ ಕಡಿತಗೊಳಿಸುತ್ತಿರುವುದನ್ನು ಖಂಡಿಸಿ ಅಡಿಕೆ ಮತ್ತು ವೀಳ್ಯದೆಲೆ ಬೆಳೆಗಾರರು ಪಟ್ಟಣದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮ್ಯಾಮ್ಕೋಸ್ ನಿರ್ದೇಶಕ ಟಿ.ಎಲ್.ರಮೇಶ್ ಮಾತನಾಡಿ, ಕಳೆದ 10 ದಿನಗಳಿಂದ ಕಸಬಾ ಹೋಬಳಿ ವ್ಯಾಪ್ತಿಯ ಚಿಕ್ಕಾತ್ತೂರು, ದಳವಾಯಿಕೆರೆ, ಇಂದಾವರ, ರಾಂಪುರ, ಅತ್ತಿಗನಾಳು, ಪಿರಮೇನಹಳ್ಳಿ ಇನ್ನಿತರ ಕಡೆಗಳಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ಬರದ ಬೇಗುದಿಗೆ ಸಿಲುಕಿರುವ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಇದೇ ರೀತಿ ತ್ರೀ ೇಸ್ ವಿದ್ಯುತ್ ಕಡಿತಗೊಳಿಸಿದರೆ ಕಷ್ಟಪಟ್ಟು ಬೆಳೆಸಿದ ಅಡಿಕೆ, ವೀಳ್ಯದೆಲೆ ಬೆಳೆ ಕಣ್ಣಮುಂದೆಯೇ ನಾಶವಾಗುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೆಸ್ಕಾಂ ಅಧಿಕಾರಿಗಳು ಬೆಳೆಗಾರರ ಸಂಕಷ್ಟ ಅರಿತು 6 ಗಂಟೆ ನಿರಂತರ ತ್ರೀಫೇಸ್ ವಿದ್ಯುತ್ ಪೂರೈಸಬೇಕು. ಆಕಸ್ಮಿಕವಾಗಿ ಲೋಡ್‌ಶೆಡ್ಡಿಂಗ್ ಆದರೆ ರಾತ್ರಿ ಹೊತ್ತಾದರೂ ಸಮಯ ನಿಗದಿಗೊಳಿಸಿ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ಮೆಸ್ಕಾಂ ಅಧಿಕಾರಿಗಳು ಇದರ ಹೊರತಾಗಿಯೂ ರೈತರ ವಿಷಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದರೆ ಉಗ್ರ ಹೋರಾಟ ನಡೆಸಿ ಕಂದಾಯ ಶಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಎಂಯುಎಸ್‌ಎಸ್ ಅಧಿಕಾರಿ ಗಿರೀಶ್, ಮೆಸ್ಕಾಂ ಎಇಇ ಮಂಜುನಾಥ್ ಆಗಮಿಸಿ ಅಡಚಣೆ ಇಲ್ಲದಂತೆ ತ್ರೀ ೇಸ್ ವಿದ್ಯುತ್ ಸರಬರಾಜು ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಮೊಟಕುಗೊಳಿಸಿದರು. ಧರ್ಮರಾಜ್, ಓಂಕಾರಪ್ಪ, ಧರ್ಮಣ್ಣ, ಕುಮಾರ್, ಅಣ್ಣಯ್ಯ, ಮಧು, ಸಿದ್ದಪ್ಪ ಮತ್ತಿತರರಿದ್ದರು.