ಕಡೂರಿನ ಕೆ.ಬಸವನಹಳ್ಳಿ ಗ್ರಾಮದಲ್ಲಿ 29 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುವ 110/11 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು 
ಚಿಕ್ಕಮಗಳೂರು

ಕಡೂರಿನ ನಾಲ್ಕು ಗ್ರಾಮಗಳಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆ

ಕಡೂರು: ಕ್ಷೇತ್ರದ ಕೆ.ಬಸವನಹಳ್ಳಿ, ಚೌಳಹಿರಿಯೂರು, ಯಳಗೊಂಡನಹಳ್ಳಿ ಗೇಟ್ ಮತ್ತು ಜಿಗಣೇಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪನೆ ಮಾಡಲಾಗುತ್ತಿದ್ದು, 14 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಉಪಕೇಂದ್ರ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕಿನ ಕೆ.ಬಸವನಹಳ್ಳಿ ಗ್ರಾಮದಲ್ಲಿ 29 ಕೋಟಿ ವೆಚ್ಚದ ನೂತನವಾಗಿ ನಿರ್ಮಾಣಗೊಳ್ಳುವ 110/11 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಹು ವರ್ಷಗಳ ಬೇಡಿಕೆಯಂತೆ ಈ ಭಾಗದಲ್ಲಿ ವಿದ್ಯುತ್ ಉಪಕೇಂದ್ರ ಆರಂಭಿಸುವ ಕಾರ್ಯದ ಹೋರಾಟಕ್ಕೆ ಪ್ರತಿ ಲದೊರಕಿದೆ. ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಾಲ್ಕು ವಿದ್ಯುತ ಉಪಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಯಗಟಿ ಹೋಬಳಿಗೆ ಕೋಟ್ಯಾಂತರ ರೂ.ಅನುದಾನ ನೀಡಲಾಗಿದೆ. ಕಳೆದ 9 ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದ ಯಗಟಿ ಮುರಾರ್ಜಿ ಶಾಲೆ ಕಟ್ಟಡ ನಿರ್ಮಾಣಕ್ಕೆ 22 ಕೋಟಿ ರೂ. ಯಗಟಿಪುರ-ಚಿಕ್ಕಬಳ್ಳೇಕೆರೆ ನಡುವಿನ ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ, ಕೊತ್ತಿಗೆರೆಯಿಂದ ಹುಳಿಗೆರೆ ಗೊಲ್ಲರಹಟ್ಟಿಗೆ ತೆರಳುವ ರಸ್ತೆಗೆ ಅಡ್ಡಲಾಗಿ 1.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಭಾಗದ ಕುಂಕನಾಡು ಕೆರೆಗೆ ಭದ್ರಾಮೇಲ್ದಂಡೆ ಯೋಜನೆಯಡಿ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಮಂಜುನಾಥ್, ಕಾರ್ಯಪಾಲಕ ಇಂಜಿನಿಯರ್ ರವಿಕಿರಣ್, ಕೆಪಿಟಿಸಿಎಲ್ ಅಧೀಕ್ಷಕ ಸುರೇಶ್, ಚಂದ್ರಶೇಖರ್, ಮುಖಂಡರಾದ ಶಿವುಕುಮಾರ್, ಕುಮಾರಪ್ಪ, ಓಂಕಾರ ಮೂರ್ತಿ, ಜಗದೀಶ್, ತಿಮ್ಲಾಪುರ ದಿನೇಶ್, ಆನಂದ್, ಗೋವಿಂದಪ್ಪ, ಗಿರೀಶ್, ಬಿಇಒ ಎಂ.ಎಚ್.ತಿಮ್ಮಯ್ಯ, ಮೆಸ್ಕಾಂ ಎಇಇ ತಿರುಪತಿನಾಯ್ಕ, ಕುಮಾರಸ್ವಾಮಿ ಮತ್ತಿತರಿದ್ದರು.