ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಇಒ ಎಚ್.ಡಿ.ನವೀನ್‌ಕುಮಾರ್ ತರಬೇತಿ ಪ್ರಮಾಣ ಪತ್ರ ವಿತರಿಸಿದರು.  
ಚಿಕ್ಕಮಗಳೂರು

ಸ್ವ ಉದ್ಯೋಗದಿಂದ ಅರ್ಥಿಕ ಸ್ವಾವಲಂಬನೆ

ಎನ್.ಆರ್.ಪುರ: ಮಹಿಳೆಯರು ಸ್ವ ಉದ್ಯೋಗ ಮಾಡುವ ಮೂಲಕ ಸ್ವಾವಲಂಬಿಗಳಾಗಿ ಬದುಕಬಹುದು ಎಂದು ತಾಪಂ ಇಒ ಎಚ್.ಡಿ.ನವೀನ್ ಕುಮಾರ್ ಹೇಳಿದರು.
ತಾಪಂ ಸಾಮರ್ಥ್ಯ ಸೌಧದಲ್ಲಿ ಚಿಕ್ಕಮಗಳೂರು ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಗೂ ಎನ್‌ಆರ್‌ಎಲ್‌ಎಂ ಯೋಜನೆ ಅಶ್ರಯದಲ್ಲಿ ಹಮ್ಮಿಕೊಂಡಿದ್ದ 15 ದಿನಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವ ವ್ಯಾಮೋಹ ಅಧಿಕವಾಗಿದೆ. ಇಂತಹ ಕಾಲಘಟ್ಟದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ, ಬಡವರಿಗೆ, ಮಧ್ಯಮ ವರ್ಗದವರಿಗೆ ಇಂತಹ ತರಬೇತಿ ಕಾರ್ಯಾಗಾರಗಳಲ್ಲಿ ಜ್ಯುವೆಲ್ಲರಿ ವಸ್ತುಗಳನ್ನು ಮಾಡುವ ತರಬೇತಿ ನೀಡುತ್ತಿರುವುದು ಪ್ರಸ್ತುತವಾಗಿದೆ ಎಂದರು.
ಈ ತರಬೇತಿಯಲ್ಲಿ ತಯಾರಿಸಿದ ವಸ್ತುಗಳು ಆನ್‌ಲೈನ್ ಮಾರುಕಟ್ಟೆಯಲ್ಲಿ ದೊರಕುವ ವಸ್ತುಗಳಿಗಿಂತ ವಿಭಿನ್ನ, ಆಕರ್ಷಣೀಯವಾಗಿವೆ. ಮಹಿಳೆಯರು ಈ ತರಬೇತಿ ಸದುಪಯೋಗ ಪಡೆದುಕೊಂಡು ಮನೆಯಲ್ಲಿ ತಾವೇ ಸ್ವತಃ ಜ್ಯುವೆಲ್ಲರಿ ಹಾಗೂ ಇನ್ನಿತರೆ ವಸ್ತುಗಳನ್ನು ತಯಾರಿಕೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಬಹುದು ಎಂದರು.
ಬಿಇಒ ಶಬಾನ ಅಂಜುಮ್ ಮಾತನಾಡಿ, ಇಲ್ಲಿನ ಶಿಬಿರಾರ್ಥಿಗಳು ತಯಾರಿಸುವ ವಸ್ತುಗಳು ಅತ್ಯಂತ ಸುಂದರ ಹಾಗೂ ಮಾರುಕಟ್ಟೆ ಬೆಲೆಗಿಂತ ಕಡಿಮೆ ಇದೆ. ಸ್ವ ಉದ್ಯೋಗಿ ಅಗುವ ಜತೆಗೆ ಮತ್ತೊಬ್ಬರಿಗೂ ಉದ್ಯೋಗ ನೀಡಬಹುದು. ಸಣ್ಣದಾಗಿ  ಉದ್ಯೋಗ ಪ್ರಾರಂಭಿಸಿ ನಂತರ ತಮ್ಮ ಗ್ರಾಮದಲ್ಲಿ ಹೆಚ್ಚಿನ ಪ್ರಚಾರ ಮಾಡಿ ನಂತರ ಆನ್‌ಲೈನ್ ಮಾರುಕಟ್ಟೆಯಲ್ಲಿಯೂ ಮಾರಾಟಕ್ಕೆ ವೇದಿಕೆ ಕಲ್ಪಿಸಿಕೊಳ್ಳಬಹುದಾಗಿದೆ.
ಬಿಸಿಎಂ ಇಲಾಖೆ ಅಧಿಕಾರಿ ಧರ್ಮರಾಜ್, ತಾಪಂ ಸಹಾಯಕ ನಿರ್ದೇಶಕಿ ಮಂಜುಳಾ, ಎನ್‌ಆರ್‌ಎಲ್‌ಎಂ ಯೋಜನೆ ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ, ವಲಯ ಮೇಲ್ವಿಚಾರಕರಾದ ಶ್ವೇತಾ, ಚೇತನ್, ತರಬೇತುದಾರರಾದ ರಶ್ಮಿ ಭಟ್ ಇದ್ದರು.