ಪಂಚನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾದಕ ವಸ್ತು ವ್ಯಸನಮುಕ್ತ ಅರಿವಿನ ಬಗ್ಗೆ ಪಿಎಸ್‌ಐ ಮಂಜುನಾಥ್ ಮಾತನಾಡಿದರು. ದೇವಿರಯ್ಯ, ಮಹೇಂದ್ರ, ಲೀಲಾವತಿ ಇದ್ದರು.
ಪಂಚನಹಳ್ಳಿ: ಮಾದಕ ವಸ್ತುಗಳ ವ್ಯಸನ ಆರೋಗ್ಯ ಹಾಳು ಮಾಡುವುದಲ್ಲದೆ, ಕುಟುಂಬದ ನೆಮ್ಮದಿ, ಶಿಕ್ಷಣ ಮತ್ತು ಉದ್ಯೋಗದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪಂಚನಹಳ್ಳಿ ಪಿಎಸ್‌ಐ ಮಂಜುನಾಥ್ ಹೇಳಿದರು.
ಪಂಚನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾದಕ ವಸ್ತು ವ್ಯಸನಮುಕ್ತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ದುರ್ಜನರ ಸಹವಾಸಕ್ಕೆ ಒಳಗಾಗದೆ ಕ್ರೀಡೆ, ಓದು, ಕಲೆ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವ್ಯಸನಕ್ಕೆ ಒಳಗಾದವರನ್ನು ತಿರಸ್ಕರಿಸುವ ಬದಲು ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಸಮಾಲೋಚನೆ ಮೂಲಕ ಸಹಾಯ ಮಾಡಿ ಸರಿ ಜೀವನಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ದೇವಿರಯ್ಯ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು. ಪ್ರಮುಖರಾದ ಮಹೇಂದ್ರ, ಮಾಧುರಿ, ಮೋಹನ್‌ಕುಮಾರ್, ಲೀಲಾವತಿ, ಇಬ್ರಾಹಿಂ ಸಾಬ್ ಇದ್ದರು.