ಕಳಸದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. 
ಚಿಕ್ಕಮಗಳೂರು

ಭಾಷೆ ಅಭಿವೃದ್ಧಿಗೆ ಡಾ.ರಾಜ್ ಕೊಡುಗೆ ಅಪಾರ

ಜಿ.ಹೆಚ್. ಧನ್ಯಕುಮಾರ್
ಕಳಸ: ಕನ್ನಡಕ್ಕೆ ಸ್ಥಾನಮಾನ ಹಾಗೂ ಅಸ್ಮಿತೆ ಉಳಿಯಲು ಡಾ.ರಾಜ್‌ಕುಮಾರ್ ಅವರ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಮಮ್ತಾಜ್ ಬೇಗಂ ಹೇಳಿದರು.
ಡಾ.ರಾಜ್ ಕನ್ನಡ ಸಂಘ, ಕಳಸ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಳಸದ ಅಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ.ರಾಜ್ ಕುಮಾರ್ ಅವರ ಕನ್ನಡಾಭಿಮಾನ ಹಾಗೂ ಹೋರಾಟದ ಲವಾಗಿ ಇಂದು ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಇಂತಹ ಸಂಭ್ರಮದ ಆಚರಣೆಯನ್ನು ಕಳಸದಲ್ಲಿ ಕಳೆದ 34 ವರ್ಷಗಳಿಂದ ಕನ್ನಡದ ಕಟ್ಟಾಭಿಮಾನಿ ಕನ್ನಡ ರಾಜು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ಮಾತ್ರ ಅನ್ಯಭಾಷಿಗರು ಇದ್ದ ಕಾಲವಿತ್ತು. ಆದರೆ ಇಂದು ಹಳ್ಳಿ ಹಳ್ಳಿಗಳಲ್ಲಿಯೂ ವಿವಿಧ ರಾಜ್ಯಗಳಿಂದ ಬಂದ ಅನ್ಯಭಾಷಿಕ ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಸ್ಥಳೀಯರಾದ ನಾವುಗಳೇ ಕನ್ನಡ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ರಕ್ಷಣೆಗೆ ಎಲ್ಲರೂ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಎಎಸ್‌ಟಿಎ ಕಳಸ ವಲಯದ ಅಧ್ಯಕ್ಷ ಇಬ್ರಾಹಿಂ ಅಹ್ಮದ್ ಮಾತನಾಡಿ, ನಾವು ವರ್ಷದಲ್ಲಿ ಒಂದೇ ದಿನ ರಾಜ್ಯೋತ್ಸವದಂದು ಕನ್ನಡ ಧ್ವಜ ನೋಡುತ್ತೇವೆ. ಆದರೆ ಕಳಸದ ಕನ್ನಡ ರಾಜು ಅವರು ವರ್ಷಪೂರ್ತಿ ತಮ್ಮ ಸ್ಕೂಟರ್‌ನಲ್ಲಿ ಕನ್ನಡ ಧ್ವಜ ಹಾರಿಸಿಕೊಂಡು ಸಂಚರಿಸುತ್ತಾರೆ. ಅವರ ದೇಹದ ಪ್ರತಿ ರಕ್ತಕಣದಲ್ಲೂ ಕನ್ನಡಾಭಿಮಾನ ತುಂಬಿಕೊಂಡಿದೆ. ಇವರು ನಿಜವಾದ ಅರ್ಥದಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸುವ ಅಪರೂಪದ ವ್ಯಕ್ತಿ ಎಂದು ಶ್ಲಾಸಿದರು.
ಕರ್ನಾಟಕ ರಕ್ಷಣಾ ವೇದಿಕೆ 2026ರ ಅಧ್ಯಕ್ಷರಾಗಿ ಆಯ್ಕೆಯಾದ ಆಶೋಕ್ ಆಚಾರ್ಯ ಅವರಿಗೆ ಚೌಡಾನಾಯಕ್ ಅವರು ಧ್ವಜ ಹಸ್ತಾಂತರಿಸಿದರು. ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು, ಕರವೇ ಮಾಜಿ ಅಧ್ಯಕ್ಷ ಶ್ಯಾಮಾಚಾರ್ಯ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜ್ವಾಲನಯ್ಯ, ಕರವೇ ಗೌರವಾಧ್ಯಕ್ಷ ಮಲ್ನಾಡ್ ಶರ್ೀ, ಚಿತ್ರ ನಿರ್ಮಾಪಕ ಲಕ್ಷ್ಮಣ್, ಉದ್ಯಮಿ ಪುನಿತ್ ಇದ್ದರು.