ಶೃಂಗೇರಿ ತಾಲೂಕಿನ ಮಸಿಗೆ ಸರ್ಕಾರಿ ಶಾಲೆಯಲ್ಲಿ ಕಾರ್ಮಿಕ ಮಿತ್ರ ಬಳಗದಿಂದ ಪ್ರಿಂಟರ್ ನೀಡಲಾಯಿತು.  
ಚಿಕ್ಕಮಗಳೂರು

ಸರ್ಕಾರಿ ಶಾಲೆಗಳ ಪ್ರಗತಿಗೆ ದಾನಿಗಳ ನೆರವು ಅಗತ್ಯ

ಶೃಂಗೇರಿ: ಸರ್ಕಾರಿ ಶಾಲೆಯಲ್ಲೂ ಖಾಸಗಿ ಶಾಲೆಯಂತೆ ಶಿಕ್ಷಣಕ್ಕೆ ಅಗತ್ಯ ಎಲ್ಲ ಸೌಲಭ್ಯ ಅಗತ್ಯ. ಅದಕ್ಕಾಗಿ ದಾನಿಗಳಿಂದ ನೆರವು ಪಡೆದು ಪ್ರಿಂಟರ್ ನೀಡಿರುವುದು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ ಎಂದು ನಿವೃತ್ತ ಶಿಕ್ಷಕ ಎನ್.ಆರ್.ಸತ್ಯನಾರಾಯಣ ಹೇಳಿದರು.
ಮೆಣಸೆ ಗ್ರಾಮ ಪಂಚಾಯಿತಿಯ ಮಸಿಗೆ ಸರ್ಕಾರಿ ಶಾಲೆಯಲ್ಲಿ ಕಾರ್ಮಿಕ ಮಿತ್ರ ಬಳಗದಿಂದ ನೀಡಲಾದ ಪ್ರಿಂಟರ್ ನೀಡಿ ಮಾತನಾಡಿ, ಶಿಕ್ಷಣ ಜೀವನದ ಮುಖ್ಯ ಅಂಗವಾಗಿದ್ದು, ಶೈಕ್ಷಣಿಕ ಪೂರಕ ವ್ಯವಸ್ಥೆ ಇದ್ದಾಗ ಕಲಿಯಲು ಪೂರಕವಾಗಿರುತ್ತದೆ. ಗ್ರಾಮೀಣ ಶಾಲೆಯಾಗಿದ್ದರೂ ಇಲ್ಲಿ ಎಲ್ಲಾ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದರು.
ಧರೆಕೊಪ್ಪ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ಮಕ್ಕಳು ಪೌಷ್ಠಿಕ ಆಹಾರದತ್ತ ಹೆಚ್ಚು ಗಮನ ಹರಿಸಬೇಕು. ಸಂಘ, ಸಂಸ್ಥೆಯವರು ನೋಟ್‌ಬುಕ್ ವಿತರಣೆಯೊಂದಿಗೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವತ್ತ ಚಿಂತನೆ ನಡೆಸಬೇಕಾಗಿದೆ ಎಂದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಚ್.ಎ.ಕಿರಣ್,ಕಾರ್ಮಿಕ ಮಿತ್ರ ಬಳಗದ ಅಧ್ಯಕ್ಷ ಶ್ರೀಕಾಂತ್, ಅಂಗುರ್ಡಿ ದಿನೇಶ್, ಭಾಸ್ಕರ ಪೂಜಾರಿ, ಶೂನ್ಯ ರಮೇಶ್, ಚೇತನ್, ವಿಶ್ವಾಸ್ ಮುಖ್ಯಶಿಕ್ಷಕ ರಾಜೇಶ್ ಇದ್ದರು.