ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ಭೀಮ ಗೋಲ್ಡ್ ಕಂಪನಿ ಕೊಡುಗೆಯಾಗಿ ನೀಡಿದ ಆಂಬುಲೆನ್ಸ್ ಅನ್ನು ಶಾಸಕ ಟಿ.ಡಿ.ರಾಜೇಗೌಡ ಸ್ವೀಕರಿಸಿದರು. ಡಾ. ಕೆ.ಪಿ.ಅಂಶುಮಂತ್, ಈಚಿಕೆರೆ ಸುಂದರೇಶ್, ಎಸ್.ಡಿ.ರಾಜೇಂದ್ರ, ಪಿ.ಆರ್.ಸದಾಶಿವ, ಜುಬೇದಾ ಇತರರಿದ್ದರು. 
ಚಿಕ್ಕಮಗಳೂರು

ಆರೋಗ್ಯ ಕ್ಷೇತ್ರಕ್ಕೆ ದಾನಿಗಳ ಕೊಡುಗೆ

ಎನ್.ಆರ್.ಪುರ: ಆರೋಗ್ಯ ಕ್ಷೇತ್ರಕ್ಕೆ ದಾನಿಗಳ ಕೊಡುಗೆ ಹಿರಿದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಭೀಮ ಗೋಲ್ಡ್ ಕಂಪನಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಆಂಬುಲೆನ್ಸ್ ಹಸ್ತಾಂತರ ಮತ್ತು ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಇತ್ತೀಚಿನ ದಿನಗಳಲ್ಲಿ ತುರ್ತು ಸೇವೆ ಅಗತ್ಯ ಹೆಚ್ಚಾಗಿದ್ದು ಆಂಬುಲೆನ್ಸ್ ಬಳಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಸೇವೆಗಳನ್ನು ನೀಡಬೇಕು. ನನ್ನ ಅಧಿಕಾರಾವಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಭೀಮ ಜ್ಯುವೆಲ್ಲರಿ ಯಿಂದ ನೀಡಿರುವ ಆಂಬುಲೆನ್ಸ್ ವಾಹನ ಸದ್ವಿನಿಯೋಗವಾಗಬೇಕು ಎಂದರು. 
ಭೀವ ಗೋಲ್ಡ್ ಕಂಪನಿ ಅಸೋಸಿಯೇಟ್ ಮ್ಯಾನೇಜರ್ ರಾಘವೇಂದ್ರ ಜಿ. ಭಟ್ ಮಾತನಾಡಿ, ಲಾಭಾಂಶದ ಒಂದು ಅಂಶವನ್ನು ಸಾರ್ವಜನಿಕರ ಸೇವೆಗಾಗಿ ಮೀಸಲಿಡಬೇಕೆಂದು ನಿರ್ಧರಿಸಲಾಗಿದೆ. ಆದ್ಯತೆ ಮೇರೆಗೆ ಆರೋಗ್ಯ ಇಲಾಖೆ ಸೇವೆಗಾಗಿ ಮೀಸಲಿಡಲಾಗಿದೆ.  ಆಂಬುಲೆನ್ಸ್‌ನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ, ತುರ್ತು ಅಗತ್ಯವಿರುವ ರೋಗಿಗಳಿಗೆ ಉತ್ತಮ ಸೇವೆ ನೀಡಿ ಆಂಬುಲೆನ್ಸ್ ಅನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದರು. 
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ನರಸಿಂಹಮೂರ್ತಿ, ಗ್ರಾಪಂ ಮಾಜಿ ಸದಸ್ಯ ಬಿನು, ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಮುಖಂಡರಾದ ಎಸ್.ಡಿ.ರಾಜೇಂದ್ರ, ಈಚಿಕೆರೆ ಸುಂದರೇಶ್, ಇ.ಸಿ.ಜೋಯಿ, ಪಿ.ಆರ್.ಸದಾಶಿವ, ಪಪಂ ಮಾಜಿ ಅಧ್ಯಕ್ಷೆ ಜುಬೇದಾ, ಪ್ರಮುಖರಾದ ಕಾರ್ತಿಕ್ ರಾವ್, ಕೆಪಿಎನ್ ಶ್ರೀನಿವಾಸ್, ಎಂ.ಬಿ.ನಿಖಿಲ್, ಡಾ. ಮಹೇಂದ್ರ ಕಿರೀಟಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು.