ಎನ್.ಆರ್.ಪುರ ತಾಲೂಕಿನ ಗ್ರಾಪಂ ಸಿಬ್ಬಂದಿ ಇಒ ಎಚ್.ಡಿ.ನವೀನ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಮಂಜುಳಾ, ಜಯಕುಮಾರ್, ನಾಗರಾಜ್, ಶಾಂತರಾಜ್, ರಾಜೇಶ್, ಜಗದೀಶ್, ಪ್ರಸನ್ನ, ನಾಗವೇಣಿ, ಲತಾ ಮತ್ತಿತರರಿದ್ದರು. 
ಚಿಕ್ಕಮಗಳೂರು

ಅನ್ಯ ಇಲಾಖೆಗಳ ಕೆಲಸ ವಹಿಸಬೇಡಿ (Gram Panchayat staff)

ಜಿ. ಗಜೇಂದ್ರ
ಎನ್.ಆರ್.ಪುರ: ಗ್ರಾಪಂ ಸಿಬ್ಬಂದಿಗೆ ಅನ್ಯ ಇಲಾಖೆಗಳ ಕೆಲಸ ವಹಿಸದಂತೆ ಆಗ್ರಹಿಸಿ ತಾಲೂಕಿನ ಎಲ್ಲ ಗ್ರಾಪಂ ಸಿಬ್ಬಂದಿ ಬುಧವಾರ ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಮೂಲ ಕರ್ತವ್ಯದ ಜತೆಗೆ ಈಗಾಗಲೇ ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನ , ಸಾರ್ವಜನಿಕ ಸೇವೆ, ತೆರಿಗೆ, ಇತರ ರಾಜಸ್ವ ಸಂಬಂಧ ಕಾರ್ಯಗಳು, ದಾಖಲೆಗಳ ನಿರ್ವಹಣೆ, ಆನ್‌ಲೈನ್ ನಮೂದು, ವರದಿ ಸಲ್ಲಿಕೆ, ಗ್ರಾಮಸಭೆ, ವಾರ್ಡ್ ಸಭೆಗಳಿಗೆ ಸಂಬಂಧಿಸಿದ ಕೆಲಸಗಳು, ಸರ್ವೇ ಕಾರ್ಯಗಳು, ಕಚೇರಿ ಕಡತಗಳ ನಿರ್ವಹಣೆ ಸಿಬ್ಬಂದಿ ಕೊರತೆ ಇದ್ದರೂ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
 ಇಂಥ ಪರಿಸ್ಥಿತಿಯಲ್ಲಿ ಗ್ರಾಪಂ ಸಿಬ್ಬಂದಿ ಕರ್ತವ್ಯ ವ್ಯಾಪ್ತಿಗೆ ನೇರವಾಗಿ ಸಂಬಂಧಿಸದ ಅನ್ಯ ಇಲಾಖೆಗಳ ಕೆಲಸಗಳನ್ನೂ ನಿರಂತರವಾಗಿ ಹೆಚ್ಚುವರಿಯಾಗಿ ನಿರ್ವಹಿಸುವುದರಿಂದ ಗ್ರಾಪಂಗೆ ಸಂಬಂಧಿಸಿದ ಮೂಲ ಕರ್ತವ್ಯಗಳನ್ನು ನಿಗದಿತ ಅವಧಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ತೊಂದರೆಯಾಗುತ್ತಿದೆ. ಸಾರ್ವಜನಿಕರ ಸೇವೆಗಳ ಮೇಲೂ ಪರಿಣಾಮ ಬೀರುತ್ತಿದೆ. ಗ್ರಾಪಂ ಸಿಬ್ಬಂದಿಗೆ ಯಾವುದೇ ಹೆಚ್ಚುವರಿ ಕರ್ತವ್ಯವನ್ನು ವಹಿಸುವ ಸಂದರ್ಭದಲ್ಲಿ ಅದು ಸರ್ಕಾರದ ಅಧಿನಿಯಮ, ನಿಯಮ, ಅಧಿಕೃತ ಆದೇಶ ಅಥವಾ ಸಕ್ಷಮ ಪ್ರಾಧಿಕಾರದಿಂದ ಹೊರಡಿಸಲಾದ ಸ್ಪಷ್ಟ ನಿರ್ದೇಶನದ ಆಧಾರದ ಮೇಲೆ ಮಾತ್ರ ಹೆಚ್ಚುವರಿ ಕಾರ್ಯ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ತಾಪಂ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಮಂಜುಳಾ, ಗ್ರಾಪಂ ಸಿಬ್ಬಂದಿ ಜಯಕುಮಾರ್, ನಾಗರಾಜ್, ಶಾಂತರಾಜ್, ರಾಜೇಶ್, ಜಗದೀಶ್, ಪ್ರಸನ್ನ, ನಾಗವೇಣಿ, ಲತಾ, ಗಿರೀಶ್, ಈರಪ್ಪ, ನಾಗೇಶ್, ರಮ್ಯಾ, ಎಸ್.ಜಾನಕಿ, ಜೀವನ್ ಮತ್ತಿತರರಿದ್ದರು.