ಎನ್.ಆರ್.ಪುರದ ಕೆಪಿಎಸ್ ಹಿರಿಯ ಪ್ರಾಥಮಿಕ ಶಾಲೆ ವಿಭಾಗದ 300 ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಿಸಲಾಯಿತು. ಲಕ್ಷ್ಮಣಶೆಟ್ಟಿ, ಉದಯ್, ಪುರುಷೋತ್ತಮ್, ರವಿಶಂಕರ್, ಅಭಿನವ ಗಿರಿರಾಜ್, ಗೂರ್, ಅಬೂಬೇಕರ್, ಸುಶ್ಮಿತಾ, ಚಂದ್ರಯ್ಯ, ಪ್ರಭು ಇದ್ದರು.
ಎನ್.ಆರ್.ಪುರ: ಶಾಲೆಯ ಮಕ್ಕಳ ಕಾಲಿನ ಅಳತೆ ಪಡೆಯದೆ ಸರ್ಕಾರವೇ ನೇರವಾಗಿ ಶೂ ನೀಡಿರುವುದರಿಂದ ಸಮಸ್ಯೆಯಾಗಿದೆ ಎಂದು ಕೆಪಿಸಿಎಸ್ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಲಕ್ಷ್ಮಣ ಶೆಟ್ಟಿ ತಿಳಿಸಿದರು.
ಪಟ್ಟಣದ ಕೆಪಿಎಸ್ ಹಿರಿಯ ಪ್ರಾಥಮಿಕ ಶಾಲೆ ವಿಭಾಗದ 300 ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಿಸಿ ಮಾತನಾಡಿದರು. ಈ ವಷರ್ ಸರ್ಕಾರ ಶಾಲೆ ಆರಂಭಕ್ಕೆ ಮೊದಲೇ ಮಕ್ಕಳಿಗೆ ಸಮವಸ್ತ್ರ ನೀಡಿರುವುದು ಶ್ಲಾಘನೀಯ. ಈಗ ಮಕ್ಕಳಿಗೆ ನೀಡಲು ಶೂ, ಸಾಕ್ಸ್ ಸಹ ಬಂದಿದೆ. ಆದರೆ ಮಕ್ಕಳಿಗೆ ಬೇಕಾದ ಅಳತೆಯ ಶೂ ನೀಡದೆ ಎಲ್ಲರಿಗೂ ಒಂದೇ ರೀತಿಯಲ್ಲಿ ಶೂ ನೀಡಿರುವುದರಿಂದ ಶೂ ಧರಿಸಲು ಸಮಸ್ಯೆಯಾಗಿದೆ. ಈ ಹಿಂದೆ ಶೂ ಖರೀದಿಸಲು ಶಾಲೆಯ ಖಾತೆಗೆ ಹಣ ಬರುತ್ತಿತ್ತು. ಶಾಲಾ ಎಸ್‌ಡಿಎಂಸಿಯವರು ಹಲವಾರು ಶೂ ಅಂಗಡಿಗಳಿಂದ ಕೊಟೇಷನ್ ತರಿಸಿಕೊಂಡು ಶೂ ಅಂಗಡಿಯವರನ್ನೇ ಶಾಲೆಗೆ ಬರಲು ಹೇಳಿ ಪ್ರತಿಯೊಬ್ಬ ಮಕ್ಕಳ ಕಾಲಿನ ಅಳತೆ ತೆಗೆದುಕೊಂಡು ಶೂ ಬದಲಿಗೆ ಪಾದರಕ್ಷೆಗಳನ್ನು ನೀಡಲಾಗುತ್ತಿತ್ತು. ಏಕೆಂದರೆ ನಮ್ಮ ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವುದರಿಂದ ಮಳೆಗಾಲದಲ್ಲಿ ಶೂ ಬದಲಿಗೆ ಚಪ್ಪಲಿಯನ್ನೇ ಬಳಸಲಾಗುತ್ತಿದೆ ಎಂದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್‌ಡಿಎಂಸಿ ಉಪಾಧ್ಯಕ್ಷ ಉದಯ್, ಮಾಜಿ ಉಪಾಧ್ಯಕ್ಷ ಪುರುಷೋತ್ತಮ, ಸದಸ್ಯರಾದ ಎಚ್.ಎನ್.ರವಿಶಂಕರ್, ಅಭಿನವ ಗಿರಿರಾಜ್, ಗಪೂರ್, ವಾಸೀಮ್, ಅಬುಬೇಕರ್, ಸುನೀತಾ, ಸುಶ್ಮಿತಾ, ಮುಖ್ಯ ಶಿಕ್ಷಕ ಚಂದ್ರಯ್ಯ, ಸಹ ಶಿಕ್ಷಕ ಪ್ರಭು ಇದ್ದರು.