ಎನ್.ಆರ್.ಪುರ ಮುಖ್ಯರಸ್ತೆಯ ಅಗಲೀಕರಣ ಕಾಮಗಾರಿಗೆ ಚಾಲನೆ ನಿಡಲಾಯಿತು. ಪಿ.ಆರ್.ಸದಾಶಿವ, ಜುಬೇದಾ, ಪ್ರಶಾಂತ್. ಎಲ್.ಶೆಟ್ಟಿ, ಲಕ್ಷ್ಮಣ್‌ಶೆಟ್ಟಿ, ಸುನೀಲ್‌ಕುಮಾರ್, ಎನ್.ಎಲ್.ಮುಕುಂದ, ಸೈಯದ್‌ವಸೀಂ, ಸುರಯ್ಯಭಾನು ಇತರರಿದ್ದರು. 
ಚಿಕ್ಕಮಗಳೂರು

ರಸ್ತೆ ವಿಸ್ತರಣೆಯಿಂದ ಕ್ಷೇತ್ರದ ಅಭಿವೃದ್ಧಿ

ಎನ್.ಆರ್.ಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಸ್ತೆ ವಿಸ್ತರಣೆಗಾಗಿ 60 ಕೋಟಿ ರೂ. ಮಂಜೂರು ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಹೇಳಿದರು.
ಅವರು ಪಟ್ಟಣದ ಎಂ.ಶ್ರೀನಿವಾಸ್ ವೃತ್ತದಲ್ಲಿ ಮುಖ್ಯ ರಸ್ತೆ ಕಾಮಗಾರಿ ಅಗಲೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ತಾಲೂಕಿಗೆ ಸಿದ್ದರಾಮಯ್ಯ ಮೂರು ಬಾರಿ ಆಗಮಿಸಿದ್ದಾರೆ.  ಹೊನ್ನೇಕುಡಿಗೆ ಸಂಪರ್ಕ ಸೇತುವೆ ಕಾಮಗಾರಿ ಉದ್ಘಾಟನೆ ಮಾಡಿ, ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಚಾಲನೆ ನೀಡಲಾಗಿದೆ ಎಂದರು.
 ಸಿದ್ದರಾಮಯ್ಯನವರ ಸೇತುವೆ ಪ್ರವಾಸಿ ತಾಣವಾಗಿದೆ. ನೂರಾರು ಜನರು ಆಗಮಿಸಿ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ರಸ್ತೆ ಅಗಲೀಕರಣಕ್ಕೆ ಈಗಾಗಲೇ ಸಾರ್ವಜನಿಕರು ಎಸಿ ಕಚೇರಿಯಲ್ಲಿ ನೋಂದಣಿ ಮಾಡಿ ಮನೆಗಳನ್ನು ತೆರವುಗೊಳಿಸಿದ್ದಾರೆ. ರಸ್ತೆ ಅಗಲೀಕರಣದಲ್ಲಿ ನಮ್ಮೂರಿನ ಭವಿಷ್ಯ ಅಡಗಿದೆ. ವಾಣಿಜ್ಯ ಚಟುವಟಿಕೆಗಳಿಗೆ ಈ ಕಾಮಗಾರಿ ಪೂರಕವಾಗಿದೆ ಎಂದರು.
ಪಪಂ ಮಾಜಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಸಿದ್ದರಾಮಯ್ಯ ಅವರ ಹೆಸರನ್ನು ಮುಖ್ಯ ರಸ್ತೆಗೆ ಇಡಲು ಪಪಂ ಸಭೆಯಲ್ಲಿಯೇ ತೀರ್ಮಾನಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಅಂಜುಮ್, ನಾಮ ನಿರ್ದೇಶಿತ ಸದಸ್ಯ ಸುಬ್ರಹ್ಮಣ್ಯ , ಆಶ್ರಯ ಸಮಿತಿ ಸದಸ್ಯ ಸುರತ್‌ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಎಸ್.ಎಸ್.ಜಗದೀಶ್, ಲಕ್ಷ್ಮಣ್‌ಶೆಟ್ಟಿ, ಸುರಯ್ಯಭಾನು, ಸುನೀಲ್‌ಕುಮಾರ್, ಸೈಯದ್‌ವಸೀಂ, ಸೋಜ, ಎನ್.ಎಲ್.ಮುಕುಂದ, ವಿಜಯ್, ದೇವಂತ್‌ರಾಜ್‌ಗೌಡ, ಹೊನ್ನೇಕುಡಿಗೆ ಗ್ರಾಪಂ ಮಾಜಿ ಸದಸ್ಯ ಮಂಜುನಾಥ್, ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ವಿಜಯಕುಮಾರ್ ಮತ್ತಿತರರಿದ್ದರು.