ಎನ್.ಆರ್.ಪುರ-ಹೊನ್ನೇಕುಡಿಗೆ ಸಂಪರ್ಕ ಸೇತುವೆಯ ಆಸುಪಾಸು ಕಂಡುಬರುವ ಭದ್ರಾ ಹಿನ್ನೀರಿನ ಆಕರ್ಷಣೀಯ ದೃಶ್ಯ.
ಎನ್.ಆರ್.ಪುರ:ತಾಲೂಕಿನ ಹೊನ್ನೇಕುಡಿಗೆಗೆ ಸಂಪರ್ಕ ಸಲುವಾಗಿ 48 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಇದೀಗ ಸುಂದರ ಪ್ರವಾಸಿ ತಾಣವಾಗಿದೆ. ಸೇತುವೆ ಹಾಗೂ ಭದ್ರಾ ಹಿನ್ನೀರಿನ ಸೌಂದರ್ಯ ಸವಿಯಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಈಗಾಗಲೇ ಲೋಕಾರ್ಪಣೆಗೆ ಸಿದ್ಧವಾಗಿರುವ ಈ ಸೇತುವೆ ಮೇಲೆ ಜನ ಸಂಚರಿಸುತ್ತ, ೆಟೋಗಳನ್ನು ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಭದ್ರಾ ಹಿನ್ನೀರಿನ ಬಣ್ಣ ನೀಲಿಯಾಗಿ ಸೂರ್ಯಾಸ್ತ ಸಮಯಕ್ಕೆ ನಯನಮನೋಹರವಾಗಿ ಕಾಣುತ್ತದೆ. ರಜಾ ದಿನಗಳಂದು ಜನರು ಸೇತುವೆ ನೋಡಲೆಂದೇ ಬರುತ್ತಿದ್ದು ಈ ಸೇತುವೆ ಒಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಸ್ಥಳೀಯರು ಇದೀಗ ಊರಿನ ಸೇತುವೆ ದೃಶ್ಯಾವಳಿಗಳನ್ನು ‘ನೋಡಬನ್ನಿ ನಮ್ಮೂರ ಸೇತುವೆ’ ಎಂದು ತಮ್ಮ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ.
ಮೂಲತಃ ಎನ್.ಆರ್.ಪುರದವರು ಉದ್ಯೋಗ ಅರಿಸಿ ವಿದೇಶಕ್ಕೆ ಹೋಗಿದ್ದರೂ ಇನ್‌ಸ್ಟಾಗ್ರಾಮ್, ೇಸ್‌ಬುಕ್, ಜಾಲತಾಣಗಳ ಮೂಲಕ ತಮ್ಮೂರಿನ ಸೇತುವೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಊರಿನ ಜನರಿಗೆ ರಜೆ ದಿನಗಳಲ್ಲಿ ಸಂಭ್ರಮಿಸಲು ಒಂದು ಸುಂದರ ಪ್ರವಾಸಿ ತಾಣ ಸಿಕ್ಕಂತಾಗಿದೆ.
ಇಂತಹ ಶಾಶ್ವತ ಕೊಡುಗೆಯನ್ನು ಸಿಎಂ ಸಿದ್ದರಾಮಯ್ಯ ಅವರು ತಾಲೂಕಿಗೆ ಆಗಮಿಸಿದಾಗ ನೀಡಿದ್ದರು. ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಅವರೇ ಉದ್ಘಾಟಿಸಲಿದ್ದಾರೆ. ಸೇತುವೆ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದವರು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರು. ಹುಟ್ಟೂರಿಗೆ ಶಾಶ್ವತ ಕೊಡುಗೆ ನೀಡಿ, ಇದೀಗ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿದ್ದರಾಮಯ್ಯ ಮೊದಲ ಅವಧಿಯ ಸಿಎಂ ಆದಾಗ 5 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದರು. ಆದರೀಗ ಈ ಸೇತುವೆಗೆ ಬರೋಬ್ಬರಿ 48 ಕೋಟಿ ರೂ.ಗೂ ಅಧಿಕ ಅನುದಾನ ನೀಡಲಾಗಿದೆ. ಎಂ.ಶ್ರೀನಿವಾಸ್ ಅವರು ಛಲ ಬಿಡದೆ ಅನುದಾನ ಮಂಜೂರು ಮಾಡಿಸಿ ಕಾಮಗಾರಿ ಮುಕ್ತಾಯ ಹಂತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.