ಬಾಳೆಹೊನ್ನೂರಿನ ಬಿಲ್ಲವ ಸಮಾಜ ಸೇವಾ ಸಂಘದ ಆವರಣದಲ್ಲಿ ಶೌಚಗೃಹ ನಿರ್ಮಾಣಕ್ಕೆ ಗ್ರಾಪಂ ಅಧ್ಯಕ್ಷ ರವಿಚಂದ್ರ ಗುದ್ದಲಿ ಪೂಜೆ ನೆರವೇರಿಸಿದರು. ಎನ್.ಎ.ಸಂಜೀವ, ಅರುಣೇಶ್, ಕೆ.ಪ್ರಭಾಕರ್, ಶಶಿಕಲಾ, ಅರುಣ್‌ಕುಮಾರ್, ಶೇಖರ್, ಸತೀಶ್ ಅರಳೀಕೊಪ್ಪ ಇತರರಿದ್ದರು.
ಬಾಳೆಹೊನ್ನೂರು:ಗ್ರಾಪಂ ಜನಪ್ರತಿನಿಧಿಗಳು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅಧಿಕಾರಿಗಳು, ಶಾಸಕರು ಹಾಗೂ ಇತರ ಸದಸ್ಯರ ಸಹಕಾರ ಅಗತ್ಯ ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಹೇಳಿದರು.
ಪಟ್ಟಣದ ಬಿಲ್ಲವ ಸಮಾಜ ಸೇವಾ ಸಂಘದ ಆವರಣದಲ್ಲಿ ಬಿ.ಕಣಬೂರು ಗ್ರಾಪಂ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಶೌಚಗೃಹ ಕಟ್ಟಡಕ್ಕೆ ಭಾನುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಪಂನ ಎಲ್ಲ ಸದಸ್ಯರ ಬೆಂಬಲದಿಂದ ಕಳೆದ ಒಂದು ವರ್ಷದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕ್ಷೇತ್ರದ ಶಾಸಕರ ಸಹಕಾರ ಪಡೆದು ಕೋಟ್ಯಂತರ ರೂ. ಅನುದಾನ ಮಂಜೂರು ಮಾಡಿಸಿಕೊಂಡು ರಸ್ತೆ ಅಗಲೀಕರಣ, ಹೈಮಾಸ್ಟ್ ದೀಪ, ವಿವಿಧ ವಾರ್ಡ್ ರಸ್ತೆಗಳ ಕಾಂಕ್ರಿಟೀಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ.
ಪಟ್ಟಣದ ರಸ್ತೆ ವಿಸ್ತರಣೆಯಾದ ಬಳಿಕ ಇಲ್ಲಿನ ಎಲ್ಲ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆದಿದ್ದು ವ್ಯಾಪಾರ ವಹಿವಾಟು ಸಹ ವೃದ್ಧಿಗೊಂಡಿದೆ. ಇಂತಹ ಅಭಿವೃದ್ಧಿ ಕಾರ್ಯಗಳು ಇನ್ನೂ ಮುಂದುವರಿಯಲಿದ್ದು ಗ್ರಾಮಸ್ಥರ, ಅಧಿಕಾರಿಗಳ, ಶಾಸಕರ ಸಹಕಾರ ಬೇಕಿದೆ ಎಂದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಎ.ಸಂಜೀವ ಮಾತನಾಡಿ, ಗ್ರಾಪಂ ಅಧ್ಯಕ್ಷರು, ಸದಸ್ಯರ ಸಹಕಾರದಿಂದ ಸಂಘಕ್ಕೆ ಶೌಚಗೃಹ ಕಟ್ಟಡ ನಿರ್ಮಾಣಕ್ಕೆ ಅನುದಾನ ದೊರೆತಿದೆ ಎಂದು ತಿಳಿಸಿದರು.
ಬಿಲ್ಲವ ಸಂಘದ ಕಾರ್ಯದರ್ಶಿ ಅರುಣ್‌ಕುಮಾರ್, ಖಜಾಂಚಿ ಶೇಖರ್ ಇಟ್ಟಿಗೆ, ಮಾಜಿ ಅಧ್ಯಕ್ಷ ಸತೀಶ್ ಅರಳೀಕೊಪ್ಪ, ರಾಮು ಸಾಲ್ಯಾನ್, ಮುದರ ಪೂಜಾರಿ, ಗ್ರಾಪಂ ಸದಸ್ಯರಾದ ಎಂ.ಎಸ್.ಅರುಣೇಶ್, ಶಶಿಕಲಾ ಉಮೇಶ್, ಪ್ರಭಾಕರ್ ಪ್ರಣಸ್ವಿ, ಜಂಶೀದ್ ಅಹ್ಮದ್, ಪ್ರತಿಮಾ ಪ್ರಶಾಂತ್, ಮಹೇಶ್, ಪ್ರಮುಖರಾದ ಕೆ.ಪ್ರಶಾಂತ್‌ಕುಮಾರ್, ಸಿ.ಪಿ.ರಮೇಶ್, ಸುನೀತಾ ಸತೀಶ್, ಪ್ರದೀಪ್, ಎಂ.ನಾರಾಯಣ, ಉಮೇಶ್, ಗಣೇಶ್ ಕುಂಬರಕೋಡು ಮತ್ತಿತರರಿದ್ದರು.