ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಬೆಂಗಾವಲು ವಾಹನ ಅಪಘಾತಕ್ಕೆ ಒಳಗಾಗಿರುವುದು 
ಚಿಕ್ಕಮಗಳೂರು

ಬೆಂಗಾವಲು ವಾಹನ ಅಪಘಾತ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಮೃತ್ ಮಹಲ್ ತಳಿ ಸಂವರ್ಧನ ಕೇಂದ್ರಕ್ಕೆ ಭೇಟಿ ನೀಡುವ ವೇಳೆ ಬೆಂಗಾವಲು ಪೊಲೀಸ್ ಜೀಪ್ ಅಪಘಾತಕ್ಕೀಡಾದ ಘಟನೆ ಶುಕ್ರವಾರ ನಡೆದಿದೆ.

ಬರ ಪರಿಸ್ಥಿತಿ ವೀಕ್ಷಣೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ಪ್ರವಾಸದಲ್ಲಿದ್ದ ಸಚಿವ ಕೆ.ಜೆ. ಜಾರ್ಜ್ ಅವರು ಅಮೃತ್ ಮಹಲ್ ತಳಿ ಸಂವರ್ಧನ ಕೇಂದ್ರಕ್ಕೆ ತೆರಳುತ್ತಿದ್ದ ವೇಳೆ, ಅವರ ಕಾರಿನ ಮುಂಭಾಗದಲ್ಲಿ ಸಾಗುತ್ತಿದ್ದ ಪೊಲೀಸ್ ಜೀಪ್ ನಿಯಂತ್ರಣ ತಪ್ಪಿ ಕೇಂದ್ರದ ಗೇಟಿಗೆ ಡಿಕ್ಕಿ ಹೊಡೆದಿದೆ.

ತಿರುವಿನಲ್ಲಿ ಬ್ರೇಕ್ ಹಾಕಿದ ಸಂದರ್ಭದಲ್ಲಿ ಜೀಪ್ ಚಾಲಕನಿಗೆ ವಾಹನ ನಿಯಂತ್ರಣಕ್ಕೆ ಸಿಗದೇ ಗೇಟಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಆದರೆ ಪೊಲೀಸ್ ಜೀಪ್‌ನ ಮುಂಭಾಗಕ್ಕೆ ಹಾನಿಯಾಗಿದೆ. ಘಟನೆಯ ಬಳಿಕ ಸಚಿವರ ವಾಹನ ಸುರಕ್ಷಿತವಾಗಿ ಮುಂದುವರಿದಿದೆ.

ಕಾಲುವೆಗಳಿಗೆ ನೀರು ಹರಿಯಿಸಿ

ತಾಲ್ಲೂಕಿನ ಹಡಗಲು ಸಮೀಪದ ಸೇತುವೆ ಬಳಿ ಹಾದು ಹೋಗಿರುವ ನೀರಿಲ್ಲದೆ ಬತ್ತಿರುವ ಕಾಲುವೆಗಳಿಗೆ ಭದ್ರಾ ನೀರು ಹರಿಸಿಕೊಡುವಂತೆ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರನ್ನು ಗ್ರಾಮಸ್ಥರು ಒತ್ತಾಯಿಸಿದರು.

ಜಮೀನುಗಳ ವೀಕ್ಷಣೆ ಸಂದರ್ಭದಲ್ಲಿ ಭದ್ರಾ ಡ್ಯಾಂನಲ್ಲಿ ಇರುವ ಒಂದಷ್ಟು ನೀರುನ್ನು ನೀಡಿದರೆ ಕೆರೆಕಟ್ಟೆಗಳಿಗೆ ಆಸರೆಯಾಗಲಿದೆ ಎಂದರು.

ಇದೇ ವೇಳೆ ಹಡಗಲು ಗ್ರಾಮದಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ಕಾಡುತ್ತಿದ್ದು ಈ ಭಾಗಕ್ಕೆ ಪ್ರತ್ಯೇಕ ಎಂಯುಎಸ್ ಎಸ್ ಘಟಕ ಸ್ಥಾಪಿಸಿಕೊಡುವಂತೆ ಮನವಿ ಮಾಡಿದಾಗ, ಪ್ರತಿಕ್ರಿಯಿಸಿದ ಸಚಿವ ಚಾರ್ಜ್ ಇಲ್ಲಿನ ಸಮಸ್ಯೆ ಏನು ಎಂಬ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಕೇಳಿದಾಗ ಸಮರ್ಪಕವಾಗಿ ಉತ್ತರ ನೀಡುವಲ್ಲಿ ತಡಬಡಾಯಿಸಿದ ಮೆಸ್ಕಾಂ ಕಿರಿಯ ಇಂಜಿನಿಯರ್ ಮೇಲೆ ಗರಂ ಆದ ಸಚಿವರು ನಿಮ್ಮ ಇಲಾಖೆಯ ಎಇಇ ಅಧಿಕಾರಿ ಎಲ್ಲಿದ್ದಾರೆ ಎಂದು ಪ್ರಶ್ನಿಸಿದಾಗ ಅವರು ಮತ್ತೊಂದು ಸಭೆಗೆ ಹೋಗಿದ್ದಾರೆ ಉತ್ತರಿಸಿದ ಕಿರಿಯ ಇಂಜಿನಿಯರ್ ಇಲಾಖೆಯಲ್ಲಿ ನನಗಿಂತ ದೊಡ್ಡವರು ಯಾರಿದ್ದಾರಪ್ಪ? ಬೇಜಾವಬ್ದಾರಿತನದ ಉತ್ತರ ಸಹಿಸುವುದಿಲ್ಲ ಎಂದು ಸಚಿವರು ಕಿರಿಯ ಅಭಿಯಂತರನ ವಿರುದ್ಧ ಸಿಡಿಮಿಡಿಗೊಂಡರು.