ಬಾಳೆಹೊನ್ನೂರಿನ ರಂಭಾಪುರಿ ಮಠ ರಸ್ತೆಯ ಮಂಜುನಾಥ್ ಅವರ ಗದ್ದೆಯಲ್ಲಿ ಆರ್‌ಎಸ್‌ಎಸ್‌ನಿಂದ ವಿವಿಧ ಕೆಸರುಗದ್ದೆ ಆಟೋಟಗಳು ನಡೆದವು. 
ಚಿಕ್ಕಮಗಳೂರು

ಮಣ್ಣಿನೊಂದಿಗೆ ಅನುಸಂಧಾನ ದೇಶಪ್ರೇಮ ಜಾಗ್ರತ (RSS)

 ಬಾಳೆಹೊನ್ನೂರು: ಮಣ್ಣಿನೊಂದಿಗೆ ಅನುಸಂಧಾನ ಹೊಂದಿದವರು ಮಾತ್ರ ನಿಜವಾದ ದೇಶಪ್ರೇಮಿಯಾಗಬಲ್ಲರು ಎಂದು ಆರ್‌ಎಸ್‌ಎಸ್ ಶೃಂಗೇರಿ ಜಿಲ್ಲಾ ಕಾರ್ಯವಾಹ ನೂತನ್ ಸೂರ್ಯ ಹೇಳಿದರು. 
ಬಾಳೆಹೊನ್ನೂರು ಹೋಬಳಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ರಂಭಾಪುರಿ ಮಠ ರಸ್ತೆಯಲ್ಲಿರುವ ದಿ.ಸ್ಕೂಲ್‌ಗದ್ದೆ ಮಂಜುನಾಥ್ ಅವರ ಗದ್ದೆಯಲ್ಲಿ ಭಾನುವಾರ ಆಯೋಜಿಸಿದ್ದ ಕೆಸರುಗದ್ದೆ ಆಟೋಟಗಳ ಸಾಂಕದಲ್ಲಿ ಮಾತನಾಡಿದರು.
1925ರಲ್ಲಿ ಸಂಘ ಸ್ಥಾಪನೆ ಮಾಡಿದ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ದೇಶೀಯ ಆಟಗಳನ್ನು ಶಾಖೆಯಲ್ಲಿ ಆಡಿಸುವ ಮೂಲಕ ಭಾರತವೆಂಬ ಪುಣ್ಯಭೂಮಿಯ ಮಣ್ಣಿನ ಜತೆಗೆ ಸಂಬಂಧ ಬೆಳೆಸಿದರು. ಇಂದಿಗೂ ಸಂಘದ ಶಾಖೆಗಳಲ್ಲಿ ದೇಶೀಯ ಆಟಗಳನ್ನು ಆಡುವ ಮೂಲಕ ಅವುಗಳನ್ನು ಉಳಿಸಿ ಬೆಳೆಸಲಾಗುತ್ತಿದೆ ಎಂದರು.
ತಾಲೂಕು ಶಾರೀರಿಕ ಪ್ರಮುಖ ಕೆ.ಎಲ್.ಅರುಣ್‌ಕುಮಾರ್ ಮಾತನಾಡಿ, ಆ.28ರಂದು ಬಾಳೆಹೊನ್ನೂರಿನ ನಾರಾಯಣಗುರು ಸಮುದಾಯ ಭವನದಲ್ಲಿ ಹೋಬಳಿ ಆರ್‌ಎಸ್‌ಎಸ್‌ನಿಂದ ರಕ್ಷಾಬಂಧನ ಕಾರ್ಯಕ್ರಮ ನಡೆಸಲಿದ್ದು ಎಲ್ಲ ಹಿಂದೂಗಳು ಭಾಗವಹಿಸುವಂತೆ ಕೋರಿದರು.
ಆರ್‌ಎಸ್‌ಎಸ್‌ನ ಸ್ವಯಂಸೇವಕರಾದ ಗುರುಪ್ರಸಾದ್, ಬಿ.ವೆಂಕಟೇಶ, ಕೃಷ್ಣಪ್ಪ ಮೇಲ್ಪಾಲ್, ಸಚಿನ್ ಸೀಕೆ, ಅಖಿಲೇಶ್, ವಿನಯ್ ಕುಮಾರ್, ಸತೀಶ್ ಕಾಮತ್, ಪ್ರಕಾಶ್  ಮುದುಗುಣಿ, ಗಣೇಶ್, ಮಂಜುನಾಥ್, ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಮಾತೃಶಕ್ತಿಯ  ಸ್ಮಿತಾ, ಮಾನಸಾ, ನಂದಿನಿ, ಚಂದ್ರಕಲಾ, ಬಿಜೆಪಿ ವಕ್ತಾರ ಜಗದೀಶ್ಚಂದ್ರ, ರಮೇಶ್ ಗಡಿಗೇಶ್ವರ ಮತ್ತಿತರರಿದ್ದರು.