ಚಿಕ್ಕಮಗಳೂರಿನ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ಭೀಮೋತ್ಸವ ಸಮಾರೋಪ ಸಮಾರಂಭದಲ್ಲಿ ಭಾರತಾಂಭೆ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಪುಷ್ಪಾರ್ಚನೆ ಮಾಡಿದರು. ಸಿ.ಟಿ.ರವಿ, ಕರಡಿಗವಿ ಮಠದ ಪೀಠಾಧ್ಯಕ್ಷ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಮಹಾಸಂಸ್ಥಾನದ ಶ್ರೀ ಬಸವನಾಗಿದೇವ ಶರಣರು, ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಉಪಸ್ಥಿತರಿದ್ದರು.
- ಆರ್‌ಎಸ್‌ಎಸ್ ಪ್ರಬಲವಾದರೆ ಜಾತಿ ವ್ಯವಸ್ಥೆ ಇರುವುದಿಲ್ಲ
- ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ
ಚಿಕ್ಕಮಗಳೂರು: ದೇಶದಲ್ಲಿ ಜಾತಿ ವ್ಯವಸ್ಥೆ ಇಲ್ಲವಾದರೆ ಕಾಂಗ್ರೆಸ್ ಬದುಕುವುದಿಲ್ಲ. ದೇಶದಲ್ಲಿ ಆರ್‌ಎಸ್‌ಎಸ್ ಪ್ರಬಲವಾದರೆ ಜಾತಿ ವ್ಯವಸ್ಥೆ ಇರುವುದಿಲ್ಲ ಎಂಬ ಕಾರಣಕ್ಕೆ ದಲಿತರಿಗೆ ಮತ್ತು ದಲಿತ ಸಂಘಟನೆಗಳಿಗೆ ಆರ್‌ಎಸ್‌ಎಸ್ ಬಗ್ಗೆ ತಪ್ಪು ಭಾವನೆ ಮೂಡಿಸಿ ಸಂಘದಿAದ ದೂರವಿಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ಭೀಮೋತ್ಸವ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ನಲ್ಲಿ ಎಂದಿಗೂ ಜಾತಿ ಕೇಳುವುದಿಲ್ಲ. ಆರ್‌ಎಸ್‌ಎಸ್ ಜಾತೀಯತೆ ನಿರ್ಮೂಲನೆ ಆಗಬೇಕು ಎಂದು ಶ್ರಮಿಸುತ್ತಿದೆ. ಜಾತಿ ವ್ಯವಸ್ಥೆ ನಿರ್ಮೂಲಯಾದರೆ ದೇಶ ಸುಭದ್ರವಾಗಲಿದೆ. ಈ ಕಾರಣದಿಂದ ಎಲ್ಲರೂ ಒಗ್ಗಟ್ಟಾಗಬೇಕಿದೆ. ಇಲ್ಲವಾದರೆ ದಲಿತರಿಗೆ ಮುಂದಿನ ದಿನಗಳಲ್ಲಿ ತುಂಬಾ ಸಂಕಷ್ಟವಾಗಲಿದೆ ಎಂದು ಎಚ್ಚರಿಸಿದರು.
ಬಿಜೆಪಿಯಲ್ಲಿ ಗರ್ಭಗುಡಿ ಸಂಸ್ಕೃತಿ ಇದೆ. ದಲಿತರು ಹೋದರೆ ಅಲ್ಲಿಗೆ ಬಿಡುವುದಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿ ಮೂಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಇಂದಿಗೂ ಮಾಡುತ್ತಿದೆ. ವಾಸ್ತವಾಗಿ ಬಿಜೆಪಿಯಲ್ಲಿ ಯಾವುದೇ ಗರ್ಭಗುಡಿ ಸಂಸ್ಕೃತಿ ಎಂಬುದೇ ಇಲ್ಲ. ರಾಜಕೀಯ ವೇದಿಕೆಗಳು ಜಾತಿ ಭೇದ ಮಾಡುವುದಕ್ಕೆ ಅಲ್ಲ. ಯಾರು ವಂಚಿತರು, ಶೋಷಿತರಿದ್ದಾರೋ ಅವರಿಗೆ ಭವಿಷ್ಯ ನೀಡುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡಬೇಕು. ಇಂದಿನ ರಾಜಕೀಯ ಪಕ್ಷಗಳು ಈ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿದರು.
ಸಿ.ಟಿ.ರವಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಎಲ್ಲನ್ನೂ ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡಿದಾಗ ರಾಜಕೀಯ ಟೀಕೆ, ಪ್ರಶ್ನೆ ಮಾಡುವುದು ಸಹಜ. ಆದರೆ ಈ ಬಗ್ಗೆ ಅಲೋಚನೆ ಮಾಡದೇ, ನಿಮ್ಮ ಕೆಲಸ ಮುಂದುವರೆಸಿ. ಒಂದು ದಿನ ನಿಮ್ಮ ಕೆಲಸಗಳು ಟೀಕೆ ಮಾಡಿದವರಿಗೆ ಉತ್ತರ ನೀಡಲಿವೆ ಎಂದರು.
ಎಲ್ಲರ ಹಿತವನ್ನು ಬಯಸುವುದೇ ಧರ್ಮ ಎಂದು ಬಿಜೆಪಿ ಭಾವಿಸಿದೆ. ಈ ಮೂಲಕ ದೇಶ ಕಟ್ಟುವ, ರಕ್ಷಣೆಯ ಕೆಲಸ ಮಾಡುತ್ತಿz್ದೆÃವೆ. ಈ ದೇಶ ಕಾಪಾಡಬೇಕೆಂದರೆ ಹಿಂದುತ್ವ, ಬಂಧುತ್ವ ಹಾಗೂ ಸಿಂಧುತ್ವ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಮಾತನಾಡಿ, ಸಿದ್ದಾಂತಕ್ಕಾಗಿ ರಾಜಕಾರಣಕ್ಕೆ ಬಂದಿz್ದÉÃನೆ. ಅದು ಸಹ ದೇಶ ಮೊದಲು, ಹಿಂದುತ್ವ, ಸಮಾಜದ ಕಟ್ಟಕಡೆಯ ಮನುಷ್ಯನಿಗೆ ನೆರವು ಆಗುವುದು ಎಂಬ ಸಿದ್ದಾಂತವಾಗಿದೆ. ಈ ಹಿನ್ನೆಲೆಯಲ್ಲಿ ಭೀಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬರೀ ರಾಜಕಾರಣ ಮಾಡುವುದು ಸುಲಭದ ಕೆಲಸವಾಗಿದೆ. ಸಮಾಜವನ್ನು ಒಡೆದು ರಾಜಕಾರಣ ಮಾಡಿಕೊಂಡು ಬಂದವರೇ ಹೆಚ್ಚು. ಸಮಾಜವನ್ನು ಒಡೆದು ರಾಜಕಾರಣ ಮಾಡುವ ತತ್ವದ ಮೇಲೆ ನಂಬಿಕೆ ಇಲ್ಲ, ಸಮಾಜವನ್ನು ಒಗ್ಗೂಡಿಸುವ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡಿz್ದÉÃವೆ ಎಂದರು.
ಸAವಿಧಾನವು ದೇಶದ ಆತ್ಮವಾಗಿದೆ. ಸಂವಿಧಾನವನ್ನು ಬಿಟ್ಟು ದೇಶ ಕಟ್ಟುವುದಕ್ಕೆ ಸಾಧ್ಯವಿಲ್ಲ. ಸಂವಿಧಾನದಿAದ ವ್ಯವಸ್ಥೆಯಲ್ಲಿ ಪರಿವರ್ತನೆ ಆಗಿದೆ. ಆದರೆ ಸಮಾಜ ಪರಿವರ್ತನೆ ಆಗಿಲ್ಲ, ಸಮಾಜ ಪರಿವರ್ತನೆ ಆದಾಗ ಮಾತ್ರ ಸದೃಢ ಸಮಾಜದಿಂದ ಸದೃಡ ದೇಶ ನಿರ್ಮಾಣ ಮಾಡುವುದಕ್ಕೆ ಸಾಧ್ಯ ಎನ್ನುವ ತತ್ವದ ಆಧಾರಿಸಿ ಹಲವಾರು ವರ್ಷದಿಂದ ಬಸವ , ಕನಕದಾಸ, ಸರ್ವಜ್ಞ, ಅಂಬೇಡ್ಕರ್ ಜಯಂತಿಯನ್ನು ಜಾತಿಯಿಂದ ಹೊರತಾಗಿ ಆಚರಣೆ ಮಾಡುತ್ತಿz್ದÉÃವೆ ಎಂದು ಹೇಳಿದರು.
ಕುವೆಂಪು, ಬಸವಣ್ಣ, ಅಂಬೇಡ್ಕರ್, ವಿವೇಕಾನಂದ ಕೇವಲ ಜಾತಿಗಾಗಿ ಬದುಕಿದವರಲ್ಲ. ಅವರ ಉಪದೇಶಗಳು, ಬದುಕಿನ ರೀತಿ ಜಾತಿ ಸಂಕೋಲೆಯನ್ನು ಮೀರಿದಾಗಿತ್ತು. ಹೀಗಾಗಿ, ಮನೆ ಮತ್ತು ಮನಗಳಲ್ಲಿ ಬದಲಾವಣೆ ತರಬೇಕು ಎಂಬ ಹಿನ್ನೆಲೆಯಲ್ಲಿ ಈ ಬಾರಿಯ ಅಂಬೇಡ್ಕರ್ ಅವರ ೧೩೫ನೇ ಜಯಂತಿಯನ್ನು ೧೩೫ ಮನೆಗಳಲ್ಲಿ ಆಚರಣೆ ಮಾಡಬೇಕೆಂಬ ಕಾರಣದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಕರಡಿಗವಿ ಮಠದ ಪೀಠಾಧ್ಯಕ್ಷ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಮಹಾಸಂಸ್ಥಾನದ ಶ್ರೀ ಬಸವನಾಗಿದೇವ ಶರಣರು, ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ವಾಗ್ಮಿ ಶ್ರೀಕಾಂತ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಬಿಜೆಪಿ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಬಿಜೆಪಿ ಯುವ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಬಿಜೆಪಿ ಮುಖಂಡರಾದ ಪುಷ್ಪರಾಜ್, ವಿಜಯಕುಮಾರ್, ರಾಜೀವ್ ಮೊದಲಾದವರಿದ್ದರು.