ಮೂಡಿಗೆರೆಯಲ್ಲಿ ತಹಸೀಲ್ದಾರ್ ಎಸ್.ಅಶ್ವಿನಿಗೆ ವಿಹಿಂಪ ಮತ್ತು ಬಜರಂಗದಳದಿಂದ ಮನವಿ ಸಲ್ಲಿಸಲಾಯಿತು. ಸುದೇವ್, ಅಭಿಲಾಷ್, ಪ್ರಶಾಂತ್, ಸಂತೋಷ್, ಶಶಿ, ರಾಜು ಇತರರಿದ್ದರು. 
ಚಿಕ್ಕಮಗಳೂರು

ವಾರದೊಳಗೆ ಗುಂಡಿ ಮುಚ್ಚಿ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಚರಂಡಿಯಲ್ಲಿ ಮಳೆ ನೀರು ಸಂಗ್ರಹ
  • ಮನವಿ ಸಲ್ಲಿಸಿ
ಮೂಡಿಗೆರೆ: ಅಮೃತ್ ಕುಡಿಯುವ ನೀರಿನ ಯೋಜನೆಯ ಪೈಪ್ ಅಳವಡಿಸಲು ಪಟ್ಟಣದಲ್ಲಿ ಕಾಂಕ್ರೀಟ್ ಮತ್ತು ಡಾಂಬರು ರಸ್ತೆ ಅಗೆದು ಪೈಪ್ ಅಳವಡಿಸಿದ ಬಳಿಕ ಗುಂಡಿಯನ್ನು ಮುಚ್ಚದೆ ಹಾಗೆ ಬಿಡಲಾಗಿದೆ. ಒಂದು ವಾರದಲ್ಲಿ ಗುಂಡಿಯನ್ನು ಕಾಂಕ್ರೀಟ್‌ನಿಂದ ಮುಚ್ಚದಿದ್ದರೆ ಪಪಂ ಕಚೇರಿಗೆ ಬೀಗ ಹಾಕುವುದಾಗಿ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಗುತ್ತಿ ಸುದೇವ್ ಹೇಳಿದರು.
ಶುಕ್ರವಾರ ತಾಲೂಕು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪದಾಧಿಕಾರಿಗಳ ಜತೆ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಒಂದು ವರ್ಷದಿಂದ ಪಟ್ಟಣದ ಎಲ್ಲ ರಸ್ತೆಯನ್ನು ಅಗೆದು ಗುಂಡಿ ನಿರ್ಮಿಸಿ ಪೈಪ್ ಅಳವಡಿಕೆ ಬಳಿಕ ಗುಂಡಿಯನ್ನು ಹಾಗೆ ಬಿಟ್ಟಿರುವುದರಿಂದ ಚರಂಡಿಯಲ್ಲಿ ಮಳೆ ನೀರು ಸಂಗ್ರಹಗೊಂಡಿದೆ. ವಾಹನಗಳು ಸಂಚರಿಸುವಾಗ ಚಕ್ರ ಗುಂಡಿಗೆ ಇಳಿದಾಗ ಕೊಳಚೆ ನೀರು ಪಾದಚಾರಿಗಳು ಮತ್ತು ವಿದ್ಯಾರ್ಥಿಗಳ ಮೇಲೆರಚುತ್ತದೆ. ಇದರಿಂದ ಪಟ್ಟಣದಲ್ಲಿ ಸಂಚರಿಸದ ಪರಿಸ್ಥಿತಿ ಉಂಟಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಚರಂಡಿ ನಿರ್ಮಿಸಿರುವುದರಿಂದ ವಾಹನಗಳು ಸಂಚರಿಸುವುದೇ ಕಷ್ಟಕರವಾಗಿದೆ. ಬೈಕ್‌ಗಳು ಚರಂಡಿಗೆ ಬಿದ್ದು ಸವಾರರು ಗಾಯಗೊಂಡಿದ್ದಾರೆ. ಈ ಬಗ್ಗೆ ಅಮೃತ್ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರ, ಇಂಜಿನಿಯರ್ ಪಪಂ ಅಧಿಕಾರಿಗಳು ಗಮನಹರಿಸಿಲ್ಲ. ಒಂದು ವಾರದಲ್ಲಿ ಪಟ್ಟಣದ ಎಲ್ಲ ಚರಂಡಿಯನ್ನು ಕಾಂಕ್ರೀಟ್‌ನಿಂದ ಮುಚ್ಚಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಜೂ.12ರಂದು ಪಪಂ ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿದರು. 
ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬದಿಯ ಅಲ್ಲಲ್ಲಿ ಕಸ ರಾಶಿಯಾಗಿ ಬಿದ್ದಿರುವುದನ್ನು  ತಹಸೀಲ್ದಾರ್ ಎಸ್.ಅಶ್ವಿನಿ ಅವರು ವಿವಿಧ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿ ತೆರವುಗೊಳಿಸಿದ್ದಾರೆ. ತಹಸೀಲ್ದಾರ್ ಕಾರ್ಯಕ್ಕೆ ವಿಹಿಂಪ ಮತ್ತು ಬಜರಂಗದಳ ಆಭಾರಿಯಾಗಿವೆ ಎಂದು ತಿಳಿಸಿದರು.
ವಿಹಿಂಪ ತಾಲೂಕು ಉಪಾಧ್ಯಕ್ಷ ಅಭಿಲಾಷ್, ಕಾರ್ಯದರ್ಶಿ ಪ್ರಶಾಂತ್, ಸಂಯೋಜಕರಾದ ಸಂತೋಷ್, ಶಶಿ, ರಾಜು, ಕಾರ್ತಿಕ್, ಧನುಷ್, ಸಾಗರ್, ಆದಿತ್ಯ, ಅವಿನಾಶ್, ಯತೀಶ್, ಜೀವನ್, ಮಣಿ ಇತರರಿದ್ದರು.