ಕೆ.ಕಣಬೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೂಲ್‌ಬ್ಯಾಗ್,ಪಠ್ಯ ಪರಿಕರಗಳನ್ನು ವಿತರಿಸಲಾಯಿತು
ಎನ್.ಆರ್.ಪುರ: ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮುತ್ತಿನಕೊಪ್ಪ ಲೀಜನ್ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಎಚ್.ಎಂ.ನಾಗರಾಜ್ ತಿಳಿಸಿದರು.
ಕೆ.ಕಣಬೂರು ಸರ್ಕಾರಿ ಶಾಲೆ ಮಕ್ಕಳಿಗೆ ಮುತ್ತಿನಕೊಪ್ಪ ಹಾಗೂ ಎನ್.ಆರ್.ಪುರ ಲೀಜನ್ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್‌ನಿಂದ ನೋಟ್‌ಬುಕ್, ಸ್ಕೂಲ್‌ಬ್ಯಾಗ್, ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ೆಬ್ರವರಿಯಿಂದ ನೂತನವಾಗಿ ಪ್ರಾರಂಭಗೊಂಡ ಮುತ್ತಿನಕೊಪ್ಪ ಸೀನಿಯರ್ ಚೇಂಬರ್ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ದೊಡ್ಡಿನತಲೆ, ಸಾತ್ಕೋಳಿ, ಕಣಬೂರು ಕಾಲನಿ ಶಾಲೆ ವಿದ್ಯಾರ್ಥಿಗಳಿಗೆ ಸ್ಕೂಲ್‌ಬ್ಯಾಗ್ ಸೇರಿದಂತೆ ವಿವಿಧ ಪಠ್ಯ ಪರಿಕರಗಳನ್ನು ವಿತರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಎನ್.ಆರ್.ಪುರ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಕೃಪಾಲ್‌ಗೌಡ ಮಾತನಾಡಿ, ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ಸರ್ಕಾರಿ ಶಾಲೆಗಳಿಗೆ ವಿವಿಧ ರೀತಿಯ ಪಠ್ಯ ಪರಿಕರಗಳನ್ನು ವಿತರಿಸಲಾಗುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಉಪಾಧ್ಯಕ್ಷ ಕೆ.ಆರ್.ನಾಗೇಂದ್ರ, ರೋಟರಿ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್, ನಿಕಟಪೂರ್ವ ಅಧ್ಯಕ್ಷ ಎಸ್.ಎಸ್.ಜಗದೀಶ್, ಎಸ್‌ಡಿಎಂಸಿ ಅಧ್ಯಕ್ಷ ರತ್ನಾಕರ್, ಉಪಾಧ್ಯಕ್ಷರಾದ ಎಂ.ಆರ್.ಸುಂದರೇಶ್, ಸತ್ಯನಾರಾಯಣ, ಎಚ್.ಎಸ್.ಸಂಜಯ್, ಟಿ.ಎಂ.ಶಿವಕುಮಾರ್, ಕೆ.ಎನ್.ಸತೀಶ್, ಬಿ.ಜೆ.ಲಕ್ಷ್ಮೀಶ್, ರಮೇಶ್, ಉಮೇಶ್, ಸೋಮಶೇಖರ್ ಇದ್ದರು.