ಬಾಳೆಹೊನ್ನೂರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿನ್ನೆಯ ನೆನಪು-ಶಾಂತಿಯುತ ನಾಳೆಯ ನಿರ್ಮಾಣ ಎಂಬ ಸಾಕ್ಷತ್ಯಚಿತ್ರ ಪ್ರದರ್ಶಿಸಲಾಯಿತು.  
ಚಿಕ್ಕಮಗಳೂರು

ಯುವ ಪೀಳಿಗೆಯಿಂದ ಅಣ್ವಸ ರಹಿತ ಜಗತ್ತು ನಿರ್ಮಾಣ

ಬಾಳೆಹೊನ್ನೂರು: ಅಣ್ವಸ ರಹಿತ ಜಗತ್ತು ನಿರ್ಮಿಸುವಲ್ಲಿ ಯುವ ಪೀಳಿಗೆ ಪಾತ್ರ ಮಹತ್ವದ್ದಾಗಿದೆ ಎಂದು ನವೋದಯ ವಿದ್ಯಾಲಯದ ಪ್ರಾಚಾರ್ಯ ಅಕ್ಷಯ್ ಕುಮಾರ್ ದ್ವಿವೇದಿ ಹೇಳಿದರು.
ಸೀಗೋಡು ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಹಿರೋಶಿಮಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,ಹಿರೋಶಿಮಾ ಮೇಲೆ ಅಣುಬಾಂಬ್ ದಾಳಿ ನಡೆದ ಐತಿಹಾಸಿಕ ಘಟನೆ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಂಡಿರಬೇಕು. ಈ ಹಿನ್ನೆಲೆಯಲ್ಲಿ ಈ ದಿನ ಆಚರಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಉಪನ್ಯಾಸಕ ಮಧುಸೂದನ್ ಮಾತನಾಡಿ, ಹಿರೋಶಿಮಾ ದುರಂತ ಭಾರತೀಯರೆಲ್ಲರ ಮನದಲ್ಲಿ ನೆನಪಿನಲ್ಲಿ ಇರುವ ದಿನವಾಗಿದೆ. ಈ ಯುದ್ಧದ ಪರಿಣಾಮಗಳು ಬಹಳಷ್ಟು ಆಗಿದ್ದವು. ಇಂತಹ ಯುದ್ಧಗಳು ಯಾವ ದೇಶದಲ್ಲೂ ನಡೆಯಬಾರದು. ಪ್ರತಿಯೊಂದು ಕಡೆಗಳಲ್ಲಿಯೂ ಜಾಗತಿಕ ಶಾಂತಿಯು ನೆಲೆಸಬೇಕಾದ ಅಗತ್ಯತೆ ಇದೆ ಎಂದರು.
ಹಿರೋಶಿಮಾ ಮೇಲೆ ನಡೆದ ಅಣುಬಾಂಬ್ ದಾಳಿ ಕುರಿತು ನಿನ್ನೆಯ ನೆನಪು-ಶಾಂತಿಯುತ ನಾಳೆಯ ನಿರ್ಮಾಣ ಎಂಬ ಸಾಕ್ಷತ್ಯಚಿತ್ರ ಪ್ರದರ್ಶಿಸಲಾಯಿತು.