ಶೃಂಗೇರಿ ಮಠಕ್ಕೆ ಶಿರಸಿ ಜೀವವೈವಿಧ್ಯ ಸಮಿತಿ ಪದಾಧಿಕಾರಿ ಉಮಾಪತಿ ಭಟ್ ಭೇಟಿ ನೀಡಿದರು. ಅರವಿಂದ ಸಿಗದಾಳ್, ಮೀನಾ ಶೆಟ್ಟಿ, ನಿಷ್ಮಾ ಇದ್ದರು. 
ಚಿಕ್ಕಮಗಳೂರು

ರೈಲು ಮಾರ್ಗದ ಸಾಧಕಬಾಧಕ ಸರ್ಕಾರದ ಗಮನ ತನ್ನಿ

ಪ್ರಮುಖ ಮುಖ್ಯಾಂಶಗಳು

  • ಶಿರಸಿ ಜೀವವೈವಿಧ್ಯ ಸಮಿತಿ ಪದಾಧಿಕಾರಿ,
  • ಬೃಹತ್ ಯೋಜನೆ
ಶೃಂಗೇರಿ: ಶೃಂಗೇರಿ ರೈಲು ಮಾರ್ಗ ಯೋಜನೆಯ ಸಾಧಕಬಾಧಕಗಳ ಕುರಿತು ಸರ್ಕಾರದ ಗಮನ ಸೆಳೆಯಲು ನರಸಿಂಹವನದ ಗುರುನಿವಾಸದಲ್ಲಿ ಗುರುವಾರ ಶಿರಸಿ ಜೀವವೈವಿಧ್ಯ ಸಮಿತಿ ಪದಾಧಿಕಾರಿ, ರಾಜ್ಯಪ್ರಶಸ್ತಿ ಪುರಸ್ಕೃತ ಉಮಾಪತಿ ಭಟ್ ಅವರು ತಂಡದ ಜತೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರಿಗೆ ಮನವಿ ಸಲ್ಲಿಸಿದರು.
ಒಂದು ಪ್ರದೇಶದ ಕಾಡು, ಭೂಮಿ, ಶುದ್ಧ ಗಾಳಿ, ನೀರು ಹಾಗೂ ಅಲ್ಲಿ ವಾಸಿಸುವ ಜನಸಾಮಾನ್ಯರಿಗೆ ಸೇರಿದೆ. ರೈಲು ಮಾರ್ಗದಂಥ ಬೃಹತ್ ಯೋಜನೆ ವಿಚಾರದಲ್ಲಿ ಸ್ಥಳೀಯ ನೆಲವಾಸಿಗಳನ್ನು ಕತ್ತಲೆಯಲ್ಲಿಟ್ಟು ಯೋಜನೆ ತಯಾರಿಸಿದರೆ ನೆಲವಾಸಿಗಳ ಆಕ್ರೋಶಕ್ಕೆ ಕಾರಣವಾಗಬಹುದು. ಸರ್ಕಾರ, ಇಲಾಖೆ, ಸಚಿವರು, ಜನಪ್ರತಿನಿಧಿಗಳು ರೈಲು ಮಾರ್ಗ ಯೋಜನೆ ಕುರಿತು ಸ್ಥಳೀಯರ ಗಮನಕ್ಕೆ ತಂದಿಲ್ಲ. ರೈಲು ಮಾರ್ಗ ನಿರ್ಮಾಣವಾಗುವ ಮೊದಲು ಸ್ಥಳೀಯರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುರಿತು ಮಠದ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದು ತಂಡದ ಸದಸ್ಯರು ಜಗದ್ಗುರುಗಳ ಗಮನಕ್ಕೆ ತಂದರು.
ಶೃಂಗೇರಿ ರೈಲು ಯೋಜನೆಯ ಸಮಗ್ರ ಅಧ್ಯಯನದ ಕುರಿತು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಶ್ರೀಗಳು ಭರವಸೆ ನೀಡಿ ಫಲ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಸಾಮಾಜಿಕ ಸೇವಾಕರ್ತರಾದ ಮೀನಾ ಶೆಟ್ಟಿ, ಕೃಷಿಕ ಅರವಿಂದ ಸಿಗದಾಳ್,ನಿಷ್ಮಾ ರಾಘವೇಂದ್ರ ಇದ್ದರು.