ಬೀರೂರಿನ ಸರಸ್ವತಿಪುರಂ ಬಡಾವಣೆ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಕಲ್ಲಿನ ಕಂಬಗಳಿಗೆ ಡಾ. ಬಿ.ಆರ್.ಅಂಬೇಡ್ಕರ್ ಹಮಾಲಿ ಸಂಘದಿಂದ ಹಿತ್ತಾಳೆ ಕವಚ ಅಳವಡಿಸಲಾಯಿತು. ಪ್ರವೀಣ, ಈಶ್ವರ್, ಮೈಲಾರಿ, ರವಿಕುಮಾರ್ ಇತರರಿದ್ದರು. 
ಚಿಕ್ಕಮಗಳೂರು

ದೇವಸ್ಥಾನದ ಕಂಬಗಳಿಗೆ ಹಿತ್ತಾಳೆ ಕವಚ ಲೇಪನ (temple)

ಜಿ. ಗಜೇಂದ್ರ
ಬೀರೂರು:  ಸರಸ್ವತಿಪುರಂ ಬಡಾವಣೆಯಲ್ಲಿನ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ನಾಲ್ಕು ಕಲ್ಲಿನ ಕಂಬಗಳಿಗೆ ಡಾ. ಬಿ.ಆರ್.ಅಂಬೇಡ್ಕರ್ ಹಮಾಲಿ ಸಂಘದಿಂದ ಭಾನುವಾರ ಹಿತ್ತಾಳೆ ಕವಚ ಲೇಪಿಸಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಶ್ರೀ ಸ್ವಾಮಿಯ ಮೂಲ ಮೂರ್ತಿಗೆ ಗಂಗಾಪೂಜೆ, ಮಹಾಸಂಕಲ್ಪ, ಗಣಪತಿ ಪೂಜೆ, ರುದ್ರಾಭಿಷೇಕ ನಂತರ ಮಹಾ ಮಂಗಳಾರತಿ ನೆರವೇರಿಸಲಾಯಿತು. ಸಂಜೆ ದೋಣಿ ಸೇವೆ, ಮಹಾ ಮಂಗಳಾರತಿ ಬಳಿಕ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. 
ದೇವಸ್ಥಾನದ ಕಂಬಗಳಿಗೆ ಸುಂದರವಾಗಿ ಕಂಚಿನ ಕವಚಗಳನ್ನು ಅಳವಡಿಸಲಾಗಿದ್ದು, ತಲಾ ಒಂದು ಕಂಬಕ್ಕೆ 25 ಕೆಜಿ ಹಿತ್ತಾಳೆ ಹಾಗೂ ನಾಲ್ಕು ಕಂಬಕ್ಕೆ 100 ಕೆಜಿ ಹಿತ್ತಾಳೆ ಒದಗಿಸಲಾಗಿದೆ. 100 ಕೆಜಿಗೆ 6.20 ಲಕ್ಷ ರೂ. ವ್ಯಯಿಸಲಾಗಿದೆ. ದೇವಸ್ಥಾನ ಅಭಿವೃದ್ಧಿ ಹಾಗೂ ಸೌಂದರ್ಯ  ಹೆಚ್ಚಿಸುವಲ್ಲಿ ಹಮಾಲಿ ಸಂಘ ಕೊಡುಗೆ ನೀಡಿದೆ.
 ಡಾ. ಬಿ.ಆರ್.ಅಂಬೇಡ್ಕರ್ ಹಮಾಲಿ ಸಂಘದ ಪ್ರವೀಣ, ಖಜಾಂಚಿ ಈಶ್ವರ್, ಕಾರ್ಯದರ್ಶಿ ಮೈಲಾರಿ, ಸದಸ್ಯರಾದ ಕೃಷ್ಣಪ್ಪ, ರವಿಕುಮಾರ್, ಶಶಿಕುಮಾರ್, ರವಿ, ಶ್ರೀನಿವಾಸ್, ಮನೋಜ್, ಕಿರಣ, ತಿಮ್ಮಪ್ಪ, ಚೇತನ್, ಅಶೋಕ್ ಇತರರಿದ್ದರು.