ಚಿಕ್ಕಮಗಳೂರು ಉಂಡೆದಾಸರಹಳ್ಳಿ ಶಾಲೋಮ್ ಎ.ಜಿ ಚರ್ಚ್ನಲ್ಲಿ ಇಂಡಿಯನ್ ಕ್ರಿಶ್ಚಿಯನ್ ಡೇ ಅಂಗವಾಗಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಸಮಾವೇಶದಲ್ಲಿ ರಕ್ತದಾನ ಮಾಡಿದವರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.
ಚಿಕ್ಕಮಗಳೂರು: ಸಮಾಜಕ್ಕೆ ನಾವು ಏನನ್ನು ಮರಳಿ ನೀಡುತ್ತೇವೆ ಎಂಬುವುದರಲ್ಲಿ ನಮ್ಮ ಬದುಕಿನ ಸಾರ್ಥಕತೆ ಅಡಗಿದೆ. ರಕ್ತದಾನ ಎಂಬುದು ಕೇವಲ ದ್ರವದ ದಾನವಲ್ಲ ಅಪರಿಚಿತ ಜೀವವೊಂದಕ್ಕೆ ಜೀವದಾನ ನೀಡುವ ಶ್ರೇಷ್ಠ ತಪಸ್ಸು ಎಂದು ಕ್ರಿಶ್ಚಿಯನ್ ಚರ್ಚಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಫಾ. ಸುಂದರ್‌ಬಾಬು ತಿಳಿಸಿದರು.
ನಗರದ ಇಂಡಿಯನ್ ಕ್ರಿಶ್ಚಿಯನ್ ಡೇ ಅಂಗವಾಗಿ ಉಂಡೆದಾಸರಹಳ್ಳಿ ಶಾಲೋಮ್ ಎ.ಜಿ ಚರ್ಚ್ನಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮಾನವ ಸೇವೆಯೇ ದೇವರ ಸೇವೆ ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನದಂತಹ ಶ್ರೇಷ್ಠ ದಾನದಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜದ ಒಳಿತಿಗೆ ಕೈ ಜೊಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ರಿಶ್ಚಿಯನ್ ಚರ್ಚಸ್ ಅಸೋಸಿಯೇಷನ್ ಅಧ್ಯಕ್ಷ ಫಾ ವಿ.ಪಿ.ರಂಗ ಮಾತನಾಡಿ ಇಂಡಿಯನ್ ಕ್ರಿಶ್ಚಿಯನ್ ಡೇ ಕೇವಲ ಆಚರಣೆಗೆ ಸೀಮಿತಗೊಳಿಸದೆ, ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಫಾದರ್ ಕೆ.ಕೆ ವರ್ಗೀಸ್ ಮಾತನಾಡಿ ಕ್ರಿಶ್ಚಿಯನ್ ಡೇ ಒಂದು ದಿನದ ಆಚರಣೆಯಲ್ಲ ಯೇಸು ಕ್ರಿಸ್ತನ ಶಿಷ್ಯನಾದ ಸಂತ ತೋಮಸ್ ಕ್ರಿ.ಶ ೫೨ ಜು. ೩ ರಂದು ಕೇರಳದ ಕೊಡಂಗಲ್ಲೂರು ಕರಾವಳಿ ಪ್ರದೇಶದಲ್ಲಿ ಯೇಸುವಿನ ಸುವಾರ್ತೆ, ಮಾನವೀಯ ಮೌಲ್ಯಗಳ ಸೇವೆ ದೇಶದಲ್ಲಿ ಆರಂಭಿಸಿದರು ಎಂದು ತಿಳಿಸಿದರು.
ಕ್ರೆÊಸ್ತ ಸಮುದಾಯ ಸಮಾಜದ ಮೇಲಿನ ತನ್ನ ಜವಾಬ್ದಾರಿಯನ್ನು ಸೇವೆಯ ಮೂಲಕ ವ್ಯಕ್ತಪಡಿಸಿದ ಮಹತ್ವದ ದಿನ ಇದಾಗಿದೆ ರಕ್ತದಾನ ಒಬ್ಬರ ಜೀವ ಉಳಿಸುವ ಪ್ರೀತಿಯ ಕಾರ್ಯವಾಗಿದ್ದು, ಉಚಿತ ಆರೋಗ್ಯ ಸೇವೆಗಳು ಸಮಾಜದಲ್ಲಿನ ಬಡವರಿಗೆ ಆಶಾಕಿರಣವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ ಚರ್ಚಸ್ ಅಸೋಸಿಯೇಷನ್ ಉಪಾಧ್ಯಕ್ಷ ಫಾ.ಸÀÄರೇಶ್ ಜೆಕೇಬ್, ಸಹಕಾರ್ಯದರ್ಶಿ ಪಾಸ್ಟರ್ ಮೋಹನ್ ನಾಯ್ಕ್, ಖಜಾಂಚಿಗಳಾದ ಪಾಸ್ಟರ್ ಬಾಬು ಪೌಲೋಸ್, ನಿರ್ದೇಶಕರುಗಳಾದ ಪಾಸ್ಟರ್ ಕೆ.ಆರ್ ಕೃಷ್ಣಪ್ಪ, ಪಾಸ್ಟರ್ ಕುರಿಯನ್, ಡಾ. ಫಾ. ರಮೇಶ್ ಪ್ರಾನ್ಸಿಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.