ಆಲ್ದೂರಿನಲ್ಲಿ ಬಿಜೆಪಿಯಿಂದ ಪಾದಯಾತ್ರೆ ನಡೆಯಿತು. ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಎಚ್.ಎಸ್.ಕವೀಶ್, ದೀಪಕ್ ದೊಡ್ಡಯ್ಯ, ಸಂಪತ್, ಸಂತೋಷ್ ಕೋಟ್ಯಾನ್, ಸಿಂಧೂಕುಮಾರ್ ಇತರರಿದ್ದರು. 
ಚಿಕ್ಕಮಗಳೂರು

ರಸ್ತೆ ದುರಸ್ತಿಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ

ಪ್ರಮುಖ ಮುಖ್ಯಾಂಶಗಳು

  • ಪ್ರತಿಮೆಗೆ ಮಾಲಾರ್ಪಣೆ
  • ಜಿಟಿಜಿಟಿ ಮಳೆ
ಆಲ್ದೂರು: ಆಲ್ದೂರು ಮಂಡಲ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಶನಿವಾರ ಪಟ್ಟಣದಿಂದ ಚಿಕ್ಕಗಮಗಳೂರಿಗೆ ಪಾದಯಾತ್ರೆ ನಡೆಸಲಾಯಿತು. 
ಬೆಳಗ್ಗೆ 9.30ಕ್ಕೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಹಾಗೂ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆರಂಭಿಸಿದ ಪಾದಯಾತ್ರೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿತು. ಭಿತ್ತಿಪತ್ರ ಹಾಗೂ ಧ್ವಜಗಳನ್ನು ಹಿಡಿದು ಕಾಂಗ್ರೆಸ್ ಹಾಗೂ ಶಾಸಕರ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತ ಸಾಗಿದರು. ಚಿಕ್ಕಮಗಳೂರಿಗೆ ಸಾಗುವ ಮುಖ್ಯ ರಸ್ತೆಯಲ್ಲಿ ಆಳುದ್ದದ ಹೊಂಡಗಳಾಗಿದ್ದು ಕಾರ್ಯಕರ್ತರು ರಸ್ತೆ ಮಧ್ಯೆ ಗುಂಡಿಗಳಲ್ಲಿ ಬಾಳೆಗಿಡಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು. 
ಬೆಳಗ್ಗೆಯಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ಮಳೆಯಲ್ಲೇ ಪಾದಯಾತ್ರೆ ನಡೆಯಿತು. ವಸ್ತಾರೆ, ಮೂಗುತಿಹಳ್ಳಿ, ರಾಂಪುರ,ಬೋಳರಾಮೇಶ್ವರ ದೇವಸ್ಥಾನ, ತೊಗರಿಹಂಕಲ್ ವೃತ್ತದ ಮೂಲಕ ಮೆರವಣಿಗೆ ಸಾಗಿತು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಉಪಾಧ್ಯಕ್ಷ ಎಚ್.ಎಸ್.ಕವೀಶ್, ಮುಖಂಡರಾದ ದೀಪಕ್ ದೊಡ್ಡಯ್ಯ, ಸಂಪತ್ ಹೆಡದಾಳ್, ರವಿ ಬಸರವಳ್ಳಿ, ಅರವಿಂದ್, ರವೀಂದ್ರ, ವೀಣಾ ಶೆಟ್ಟಿ, ಚಂಪಾ, ಭವ್ಯಾ, ಪ್ರತಿಭಾ, ಮಮತಾ, ಸಂತೋಷ್ ಕೋಟ್ಯಾನ್, ಸಿಂಧೂಕುಮಾರ್, ಶಶಿ, ಚೇತನ್, ವಿನಯ್, ಆಕರ್ಷ್, ಹರೀಶ್, ರಂಜನ್, ದಿನೇಶ್ ಮುಗಳವಳ್ಳಿ ಇತರರಿದ್ದರು.