ಎನ್.ಆರ್.ಪುರದ ನಾಗಲಾಪುರ ಗ್ರಾಪಂನಲ್ಲಿ ಎಸ್‌ಐಆರ್ ಅರಿವು ಮೂಡಿಸಲಾಯಿತು. ಪ್ರೇಮಕುಮಾರ್, ಲತಾ, ಪ್ರಸನ್ನ, ಪೂರ್ಣಿಮಾ, ಅನ್ನಮ್ಮ, ಜಯಕುಮಾರ ಇದ್ದರು. 
ಚಿಕ್ಕಮಗಳೂರು

ನಾಗಲಾಪುರದಲ್ಲಿ ಅರಿವು ಜಾಥಾ

ಪ್ರಮುಖ ಮುಖ್ಯಾಂಶಗಳು

  • ವಿಕಲಾಂಗರು
  • ಜಾಥಾ ಕಾರ್ಯಕ್ರಮದಲ್ಲಿ
ಎನ್.ಆರ್.ಪುರ: ಯಾವುದೇ ಅರ್ಹ ಮತದಾರರು ಮತದಾನದಿಂದ ಹೊರಗುಳಿಯಬಾರದು ಎಂದು ನಾಗಲಾಪುರ ಪಿಡಿಒ ಪ್ರೇಮಕುಮಾರ್ ತಿಳಿಸಿದರು.
 ನಾಗಲಾಪುರ ಗ್ರಾಪಂನಿಂದ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ, ಗಣತಿಗೆ ಅನುಗುಣವಾಗಿ ಅರ್ಹ ಯುವ ಮತದಾರರು, ವಿಕಲಾಂಗರು ಮತದಾನದಿಂದ ಹೊರಗುಳಿಯಬಾರದು ಎಂದು ಜಿಪಂ ಸಿಇಒ ಹಾಗೂ ತಾಪಂ ಇಒ ಮಾರ್ಗದರ್ಶನದಲ್ಲಿ ಸಮಗ್ರ ಜಾಗೃತಿ ಅಭಿಯಾನದ ಮೂಲಕ ವಿವಿಧ ರೀತಿಯ ಜಾಗೃತಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮತದಾರರು ಎಸ್‌ಐಆರ್ ಕಾರ್ಯದಲ್ಲಿ ಬಿಎಲ್‌ಒ ಅವರೊಂದಿಗೆ ಸಹಕರಿಸಬೇಕು. ನಿಮ್ಮ ಮಾಹಿತಿ ಬಿಎಲ್‌ಒಗೆ ನೀಡಿದ ನಮೂನೆಯಲ್ಲಿ ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು. ಇದು ಪ್ರತಿ ಮತದಾರನ ಕರ್ತವ್ಯ ಎಂದರು.
ಬಸ್ತಿಮಠದಿಂದ ಸುಂಕದಕಟ್ಟೆವರೆಗೆ ಶಾಲಾ, ಕಾಲೇಜುಗಳ ಮಕ್ಕಳೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಘೋಷಣೆಗಳನ್ನು ಕೂಗುತ್ತ ಮತದಾರರಲ್ಲಿ ಅರಿವು ಮೂಡಿಸಲಾಯಿತು.
ಶ್ರೀಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆ ಶಿಕ್ಷಕರಾದ ಸುಜಾತಾಕುಮಾರಿ, ಶಾರದಾ, ಅಜಿತಾ, ನಿಶ್ಚಿತಾ, ಪಿ.ಸುರೇಶ್, ಗುಣಪಾಲ್ ಜೈನ್ ಲತಾ, ಪ್ರಸನ್ನ, ಪೂರ್ಣಿಮಾ, ಅನ್ನಮ್ಮ, ಜಯಕುಮಾರ ಇದ್ದರು.