ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಚಿಕ್ಕಮಗಳೂರು ರೌಂಡ್ ಟೇಬಲ್ ಸಹಯೋಗದಲ್ಲಿ ವಿವಿಧ ಇಲಾಖಾ ಅಧಿಕಾರಿ, ಸಿಬ್ಬಂದಿಗೆ ಹಮ್ಮಿಕೊಂಡಿದ್ಧ ಕಾರ್ಯಕ್ರಮದಲ್ಲಿ ಪ್ರೆÊಡ್ ಆಫ್ ಚಿಕ್ಕಮಗಳೂರು-೨೦೨೬ ಪ್ರಶಸ್ತಿ ವಿತರಿಸಲಾಯಿತು. 
ಚಿಕ್ಕಮಗಳೂರು

ಸಮಾಜಮುಖಿ ಕಾರ್ಯಕ್ಕೆ ಪುರಸ್ಕಾರ

ನಿತ್ಯಾನಂದ ಎಸ್.ಎನ್.
ಚಿಕ್ಕಮಗಳೂರು: ಸಮಾಜಮುಖಿ ಕಾರ್ಯಗಳಿಗೆ ಪುರಸ್ಕಾರ, ಸಮಾಜದ ಒಳಿತಿಗಾಗಿ ಶ್ರ ಮಿಸುವ ಸಾಧಕರನ್ನು ಗುರುತಿಸಿ, ಗೌರವಿಸುವ ಕಾರ್ಯ ಉತ್ತಮ ಬೆಳವಣಿಗೆ ಎಂದು ಜಿಲ್ಲಾ ಪೊಲೀಸ್ ಹೆಚ್ಚುವರಿ ಅಧೀಕ್ಷಕ ಸಿ.ಟಿ.ಜಯಕುಮಾರ್ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಚಿಕ್ಕಮಗಳೂರು ರೌಂಡ್ ಟೇಬಲ್ ಸಹಯೋಗದಲ್ಲಿ ವಿವಿಧ ಇಲಾಖಾ ಅಧಿಕಾರಿ, ಸಿಬ್ಬಂದಿಗೆ ಹಮ್ಮಿಕೊಂಡಿದ್ಧ ಕಾರ್ಯಕ್ರಮದಲ್ಲಿ ಪ್ರೆÊಡ್ ಆಫ್ ಚಿಕ್ಕಮಗಳೂರು-೨೦೨೬ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಯಾವುದೇ ಫಲಾಫೇಕ್ಷೆ ಇಲ್ಲದೇ ತಳಮಟ್ಟದಿಂದ ಕಾರ್ಯನಿರ್ವಹಿಸುವ ಅಗ್ನಿಶಾಮಕ, ಆರೋಗ್ಯ ಇಲಾಖೆ, ನಗರಸಭೆ, ಪೊಲೀಸರು, ಮೆಸ್ಕಾಂ ಸಿಬ್ಬಂದಿ ಹಾಗೂ ಸಮಾಜಸೇವಾ ಕಾರ್ಯದಲ್ಲಿ ಗುರುತಿಸಿಕೊಂಡಿರುವ ಅರ್ಹರನ್ನು ಗುರುತಿಸುವ ಕಾರ್ಯ ಪೊಲೀಸ್ ಇಲಾಖೆ ಮಾಡಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮನುಷ್ಯನ ಜೀವನದಲ್ಲಿ ಎಷ್ಟೇ ದುಡಿದರೂ, ಕೆಲವೊಮ್ಮೆ ನೆಮ್ಮದಿ ಎಂಬುದು ಲಭಿಸುವುದಿಲ್ಲ. ಅದಕ್ಕಾಗಿ ಕೆಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಲ್ಲಿ ಬಾಳಿನಲ್ಲಿ ಮನಶಾಂತಿ, ಬದುಕಿನ ಸಾರವನ್ನು ತಿಳಿದುಕೊಳ್ಳಬಹುದು. ಅದರಂತೆ ವಿವಿಧ ಇಲಾಖೆಯ ಸುಮಾರು ೩೦ ಮಂದಿ ನಿಸ್ವಾರ್ಥದ ಕೆಲಸದಿಂದಲೇ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಚಿಕ್ಕಮಗಳೂರು ರೌಂಡ್ ಟೇಬಲ್ ಅಧ್ಯಕ್ಷ ಟಿ.ಪಿ.ದರ್ಶನ್ ಮಾತನಾಡಿ, ಸಮಾಜದಲ್ಲಿ ಸೇವಾ ಗುಣದಿಂದ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಪೊಲೀಸ್ ಇಲಾಖೆ ಗುರುತಿಸಿದೆ. ಅದಕ್ಕೆ ಪೂರಕವಾಗಿ ರೌಂಡ್ ಟೇಬಲ್ ಸಂಸ್ಥೆ ಪುರಸ್ಕಾರದ ವ್ಯವಸ್ಥೆ ಕೈಗೊಂಡಿದೆ. ಅಲ್ಲದೇ ಮುಂದೆ ಪೊಲೀಸರ ಕ್ಷೇಮಾಭಿವೃದ್ದಿಗೂ ೫೦ ಸಾವಿರ ರೂ. ಮೀಸಲಿಡುವುದಾಗಿ ತಿಳಿಸಿದರು.
ಮನುಷ್ಯನ ಜೀವನ ಕೇವಲ ಹುಟ್ಟು-ಸಾವಿಗೆ ಸೀಮಿತರಾಗಬಾರದು. ಬದುಕಿದಷ್ಟು ದಿನ ಗುರು-ಹಿರಿ ಯರನ್ನು ಗೌರವಿಸುವುದು, ಸಮಾಜಮುಖಿ ಚಿಂತನೆ, ಬಡತನದ ನಲುಗುವ ವ್ಯಕ್ತಿಗಳು ಹಾಗೂ ಆರ್ಥಿಕ ಸಂಕಷ್ಟ ನಡುವೆ ಅನಾರೋಗ್ಯಕ್ಕೆ ತುತ್ತಾಗಿರುವವರಿಗೆ ಸಹಾಯಹಸ್ತ ಚಾಚುವ ಕಾರ್ಯ ಮಾಡಬೇಕಿದೆ. ಹೀ ಗಾಗಿ ರೌಂಡ್ ಹಲವೆಡೆ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಸಹಾಯಕ ಆಡಳಿತಾಧಿಕಾರಿ ಶಂಕರ್‌ಸಿAಗ್, ರೌಂಡ್ ಟೇಬಲ್ ಮಾಜಿ ಅಧ್ಯಕ್ಷ ಎನ್.ಎಸ್.ಅನಿಲ್, ಸದಸ್ಯರಾದ ವಿನಯ ರಾಜ್, ರಾಷ್ಟಿçÃತ್, ಸಮನ್ವಿತ್, ಕಾರ್ತಿಕ್ ಉಡುಪ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.