ಚಿಕ್ಕಮಗಳೂರು ತಾಲೂಕಿನ ಕೆಳಗೂರು ಸಮೀಪದ ದಿಣ್ಣೆಕೆರೆ ಗ್ರಾಮದಲ್ಲಿ ಸಮೃದ್ಧಿ ಅಂಕನಾಥೇಶ್ವರ ಗೊಬ್ಬರ ಕಂಪನಿಯ ಏಜೆಂಟ್ ತಿಪ್ಪೇಸ್ವಾಮಿ ಎಂಬುವವರು ರೈತರಿಗೆ ಸಿರಿ ಸಮೃದ್ಧಿ ಬಯೋ ಆರ್ಗ್ಯಾನಿಕ್ ಹೆಸರಿನಲ್ಲಿ ನಕಲಿ ಸಾವಯವ ಗೊಬ್ಬರವನ್ನು ಮಾರಾಟ ಮಾಡಲು ಮುಂದಾಗಿದ್ದ ವೇಳೆ ದಾಳಿ ನಡೆಸಿದ ಕೃಷಿ ಇಲಾಖೆ ಅಧಿಕಾರಿಗಳು ಗೊಬ್ಬರದ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
- ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕಳಪೆ ಸಾವಯವ ಗೊಬ್ಬರವನ್ನು ರೈತರಿಗೆ ಮಾರಾಟ
- ಚಿಕ್ಕಮಗಳೂರು ತಾಲೂಕಿನ ಕೆಳಗೂರು ಸಮೀಪದ ದಿಣ್ಣೆಕೆರೆ ಗ್ರಾಮ
ಚಿಕ್ಕಮಗಳೂರು: ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕಳಪೆ ಸಾವಯವ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಲು ಯತ್ನಿಸಿದ ಜಾಲವನ್ನು ಕೃಷಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕೆಳಗೂರು ಸಮೀಪದ ದಿಣ್ಣೆಕೆರೆ ಗ್ರಾಮದಲ್ಲಿ ಸಮೃದ್ಧಿ ಅಂಕನಾಥೇಶ್ವರ ಗೊಬ್ಬರ ಕಂಪನಿಯ ಏಜೆಂಟ್ ತಿಪ್ಪೇಸ್ವಾಮಿ ಎಂಬುವವರು ರೈತರಿಗೆ ಸಿರಿ ಸಮೃದ್ಧಿ ಬಯೋ ಆರ್ಗ್ಯಾನಿಕ್ ಹೆಸರಿನಲ್ಲಿ ನಕಲಿ ಸಾವಯವ ಗೊಬ್ಬರವನ್ನು ಮಾರಾಟ ಮಾಡಲು ಮುಂದಾಗಿದ್ದರು.
ಆದರೆ ಸ್ಥಳೀಯ ರೈತರು ಈ ಗೊಬ್ಬರವನ್ನು ನೀರಿನಲ್ಲಿ ತೊಳೆದು ಜಾಗರೂಕತೆಯಿಂದ ಪರೀಕ್ಷಿಸಿದಾಗ ಅದರಲ್ಲಿ ಕೇವಲ ಮಣ್ಣು ಮಿಶ್ರಿತವಾಗಿರುವುದು ಪತ್ತೆಯಾಗಿದ್ದು, ಅದು ಸಂಪೂರ್ಣ ಕಳಪೆ ಗುಣಮಟ್ಟದ ಕಲಬೆರಕೆ ಗೊಬ್ಬರ ಎಂದು ಖಚಿತವಾಗಿದೆ. ರೈತರು ತಕ್ಷಣವೇ ನೀಡಿದ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಕೃಷಿ ಇಲಾಖೆಯ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದಾಗ ಇದು ನಕಲಿ ಗೊಬ್ಬರ ಎಂದು ತಿಳಿದು ಬಂದಿದೆ.
ನಕಲಿ ಗೊಬ್ಬರವನ್ನು ಮದ್ದೂರಿನಿಂದ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ. ಅಷ್ಟೇ ಅಲ್ಲದೆ ರೈತರನ್ನು ದಾರಿ ತಪ್ಪಿಸುವ ಉz್ದೆÃಶದಿಂದ ಗೊಬ್ಬರದ ಚೀಲಗಳ ಮೇಲೆ ತಪ್ಪು ಲೇಬಲಿಂಗ್ ಮುದ್ರಿಸಿರುವುದು ಕೂಡ ಅಧಿಕಾರಿಗಳ ಪರಿಶೀಲನೆ ವೇಳೆ ದೃಢಪಟ್ಟಿದೆ. ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ರಸಗೊಬ್ಬರ ಸರಬರಾಜು ಮಾಡುವುದು ಮತ್ತು ತಪ್ಪು ಲೇಬಲಿಂಗ್ ಬಳಸಿ ವಂಚಿಸಿದ ಹಿನ್ನೆಲೆಯಲ್ಲಿ ಜಾರಿದಳದ ಅಧಿಕಾರಿಗಳು ಸ್ಥಳದಲ್ಲಿದ್ದ ೩೦ ಮೂಟೆ ಕಳಪೆ ಸಾವಯವ ಗೊಬ್ಬರ ಹಾಗೂ ಸರಬರಾಜಿಗೆ ಬಳಸಿದ್ದ ವಾಹನವನ್ನು ಜಪ್ತಿ ಮಾಡಿದ್ದಾರೆ.
ಈ ಅಕ್ರಮ ದಂಧೆಗೆ ಸಂಬAಧಿಸಿದAತೆ ವಾಹನ ಚಾಲಕ ಕುಮಾರ್ ಮತ್ತು ಏಜೆಂಟ್ ತಿಪ್ಪೇಸ್ವಾಮಿ ಅವರನ್ನು ವಶಕ್ಕೆ ಪಡೆದು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಂತಹ ನಕಲಿ ಕಂಪನಿಗಳ ಜಾಲದ ಬಗ್ಗೆ ರೈತರು ಹಾಗೂ ಬೆಳೆಗಾರರು ಸದಾ ಜಾಗರೂಕರಾಗಿರಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.