ಬಾಳೆಹೊನ್ನೂರಿನ ಜೆಸಿಐ ಸಂಸ್ಥೆಯಿಂದ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಜೇಸಿ ಪರಿವಾರದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿ.ಎಸ್.ಸನತ್, ಶ್ರೀನಾಥ್ ಪೊದುವಾಳ್, ಇಬ್ರಾಹಿಂ ಶಾಫಿ, ರಂಜಿತ್, ರೋಹಿತ್ ಇದ್ದರು. 
ಚಿಕ್ಕಮಗಳೂರು

ಅಂಕ ಗಳಿಕೆಯೊಂದಿಗೆ ವಿಶ್ವಜ್ಞಾನವೂ ಮುಖ್ಯ

ಜಿ. ಗಜೇಂದ್ರ
ಬಾಳೆಹೊನ್ನೂರು: ವಿದ್ಯಾರ್ಥಿಗಳಿಗೆ ಅಂಕ ಗಳಿಕೆಯೊಂದೇ ಮಾನದಂಡವಲ್ಲ. ಅಂಕ ಗಳಿಕೆಯೊಂದಿಗೆ ವಿಶ್ವಜ್ಞಾನವೂ ಮುಖ್ಯ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿ ಶ್ರೀನಾಥ್ ಪೊದುವಾಳ್ ಹೇಳಿದರು.
ಪಟ್ಟಣದ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಪಿಯುಸಿ ಹಂತಕ್ಕೆ ತಲುಪಿದ ಬಳಿಕ ಓದಿನ ಶೈಲಿ, ಕಾಲೇಜಿನ ವಾತಾವರಣ ಎಲ್ಲವೂ ಬದಲಾಗಲಿದ್ದು ಅಲ್ಲಿ ಬಹಳ ಅರ್ಥೈಸಿಕೊಂಡು ಅಧ್ಯಯನಶೀಲರಾಗಬೇಕಿದೆ. ಈ ಹಿಂದೆ ದೇಶಗಳ ನಡುವೆ ಸ್ಪರ್ಧೆಗಳಾಗುತ್ತಿದ್ದವು. ಆದರೆ ಇಂದು ಸ್ಪರ್ಧೆಗಳ ಬದಲು ಕದನಗಳು ಆಗುತ್ತಿವೆ. ವಿದ್ಯಾರ್ಥಿಗಳು ನಿರಂತರ ಓದಿನೆಡೆಗೆ ಗಮನಹರಿಸಿ ಸಾಧನೆ ಮಾಡಬೇಕಿದೆ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಜೇಸಿ ಪರಿವಾರದ ಸಾನ್ವಿತ ಭಾಸ್ಕರ್, ವಿಸ್ಮಯ ಪ್ರಶಾಂತ್‌ಕುಮಾರ್, ಇನಿದ ಸತೀಶ್, ವೈಷ್ಣವ್‌ರಾಜ್ ಅವರನ್ನು ಸನ್ಮಾನಿಸಲಾಯಿತು. ಜೆಸಿಐ ಅಧ್ಯಕ್ಷ ಬಿ.ಎಸ್.ಸನತ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಶಾಫಿ, ಕಾರ್ಯದರ್ಶಿ ಎ.ರಂಜಿತ್, ಖಜಾಂಚಿ ವಿ.ರೋಹಿತ್, ಪೂರ್ವಾಧ್ಯಕ್ಷ ಭಾಸ್ಕರ್ ವೆನಿಲ್ಲಾ, ಸುರೇಂದ್ರ ಮಾಸ್ತರ್, ಅಹ್ಮದ್ ಜಮೀರ್, ಚೈತನ್ಯ ವೆಂಕಿ, ಸುಧಾಕರ್, ರಿಚರ್ಡ್ ಮಥಾಯಿಸ್ ಮತ್ತಿತರರಿದ್ದರು.