ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠೀಯಲ್ಲಿ ಡಿಎಸ್ಎಸ್ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿದರು. 
ಚಿಕ್ಕಮಗಳೂರು

ಭದ್ರಾ ಅಭಯಾರಣ್ಯದಲ್ಲಿ ಭ್ರಷ್ಟಾಚಾರದ ಆರೋಪ

ಪ್ರಮುಖ ಮುಖ್ಯಾಂಶಗಳು

  • ಭದ್ರಾ ಅಭಯಾರಣ್ಯದಲ್ಲಿ ಭ್ರಷ್ಟಾಚಾರ
  • ಮೌನ ವಹಿಸಿರುವ ಅಧಿಕಾರಿಗಳು
  • ದಲಿತ ಸಂಘರ್ಷ ಸಮಿತಿ ಆರೋಪ
ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ದಲಿತ ಸಂಘರ್ಷಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ ಆರೋಪಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ೨೬ ವರ್ಷಗಳಿಂದ ಭದ್ರಾಅಭಯಾರಣ್ಯ ಘೋಷಣೆಯಾಗಿರುವುದು ಸರಿಯಷ್ಟೆ. ಈ ಯೋಜನೆಯಿಂದ ದಟ್ಟವಾದ ಅರಣ್ಯ, ಜೀವಸಂಕುಲ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯೊಂದಿಗೆ ಜಿಲ್ಲೆ ಹೆಸರುವಾಸಿಯಾಗುತ್ತದೆ ಎಂಬುದು ಸ್ಥಳೀಯರ ಕನಸಾಗಿತ್ತು. ದುರಂತವೆಂದರೆ ಅಭಿವೃದ್ಧಿಯ ಬದಲಾಗಿದೆ. ಅಭಯಾರಣ್ಯ ಪ್ರತಿನಿತ್ಯ ಭ್ರಷ್ಟಾಚಾರದ ಗೂಡಾಗುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪುಟ್ಟಸ್ವಾಮಿ, ವೆಂಕಟೇಶ್ ಇದ್ದರು.