- ತಲೆಮರೆಸಿಕೊಂಡ ಮಗ
- ಕಾಡು ಪ್ರಾಣಿಗಳ ಬೇಟೆಗಾಗಿ
ಆಲ್ದೂರು: ಕುಂದೂರು-ಸಾರಗೋಡು ಮೀಸಲು ಅರಣ್ಯದ ಭಟ್ರುಗದ್ದೆ ಗ್ರಾಮದ ಸಮೀಪ ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವನ್ನಪ್ಪಿದ ಪ್ರಕರಣದಲ್ಲಿ ಆಲ್ದೂರು ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಹೆಬ್ಬಳಗದ್ದೆ ಗ್ರಾಮದ ಪುಟ್ಟಸ್ವಾಮಿ ಗೌಡ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಮಗ ಪ್ರದೀಪ್ ತಲೆಮರೆಸಿಕೊಂಡಿದ್ದಾನೆ. ಕಾಡು ಪ್ರಾಣಿಗಳ ಬೇಟೆಗಾಗಿ ಕಾಫಿ ತೋಟದಲ್ಲಿ ಹಾಗೂ ಅರಣ್ಯದ ನಡುವೆ ಕಾಡಾನೆಗಳು ಸಂಚಾರ ಮಾಡುವ ಮಾರ್ಗದಲ್ಲಿ ವಿದ್ಯುತ್ ತಂತಿಯನ್ನು ಅಳವಡಿಸಿದ್ದರು. ಕಳೆದ ವಾರ ಈ ಮಾರ್ಗದಲ್ಲಿ ಕಾಡಾನೆ ಸಂಚರಿಸುವಾಗ ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವನ್ನಪ್ಪಿತ್ತು. ನಂತರ ಆರೋಪಿಗಳು ವಿದ್ಯುತ್ ತಂತಿಯನ್ನು ತೋಟದಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದರು ಎನ್ನಲಾಗಿದೆ.
ಆರೋಪಿಗಳ ಪತ್ತೆಗಾಗಿ ಡಿಎ್ಒ ಬೋರಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ್ ಹಾಗೂ ಆಲ್ದೂರು ವಲಯ ಅರಣ್ಯಾಧಿಕಾರಿ ಹರೀಶ್ ನೇತತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿದಾಗ ಕೊಟ್ಟಿಗೆಹಾರದಲ್ಲಿ ಆರೋಪಿ ತಂಗಿರುವ ಮಾಹಿತಿ ತಿಳಿದು ದಾಳಿ ನಡೆಸಿ ಪುಟ್ಟಸ್ವಾಮಿ ಗೌಡನನ್ನು ಬಂಧಿಸಿತು. ಕತ್ಯದಲ್ಲಿ ಮಗ ಪ್ರದೀಪ್ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುವುದಾಗಿ ಆಲ್ದೂರು ವಲಯ ಅರಣ್ಯಾಧಿಕಾರಿ ಹರೀಶ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಆರ್‌ಎ್ಒಗಳಾದ ಸಂದೀಪ್, ಗೌರೀಶ್, ಅರಣ್ಯ ಗಸ್ತುಪಾಲಕರಾದ ವಿಜಯ್‌ಕುಮಾರ್, ನಂದನ್‌ಕುಮಾರ್, ಪುನೀತ್‌ಕುಮಾರ್, ಆನೆ ಕಾರ್ಯಪಡೆ ಸಿಬ್ಬಂದಿ ಪಾಲ್ಗೊಂಡಿದ್ದರು.