ಟಿ.ಡಿ.ರಾಜೇಗೌಡರು ಶಾಸಕರಾಗಿ ಮುಂದುವರಿಯಲು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಎನ್.ಆರ್.ಪುರ: ಟಿ.ಡಿ.ರಾಜೇಗೌಡರು ಶೃಂಗೇರಿ ಶಾಸಕರಾಗಿ ಮುಂದುವರಿಯುವಂತೆ ಸುಪ್ರೀಂ ಕೋರ್ಟ್ ಅದೇಶ ನೀಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ, ಶೃಂಗೇರಿ ಕ್ಷೇತ್ರದ ಪವಿತ್ರತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ಆರ್.ರವಿಶಂಕರ್ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿ, ಬಗರ್ ಹುಕುಂ ದಾಖಲೆಗಳ ತಿದ್ದುಪಡಿ ಬಗ್ಗೆ ಡಿ.ಎನ್.ಜೀವರಾಜ್ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಈಗ ಟಿ.ಡಿ.ರಾಜೇಗೌಡ ಅವರು ಪಡೆದ ಪುರಸ್ಕೃತ ಮತಗಳನ್ನು ತಿರಸ್ಕೃತ ಮಾಡಿರುವ ಆರೋಪದ ಮೇಲೆ ಸುಧೀರ್‌ಕುಮಾರ್ ಮುರೊಳ್ಳಿ ದಾಖಲಿಸಿರುವ ಪ್ರಕರಣದಲ್ಲಿಯೂ ಕ್ರಿಮಿನಲ್ ಕೇಸ್ ದಾಖಲಾಗುವ ದಿನಗಳು ದೂರವಿಲ್ಲ ಎಂದರು.
ಕಾಂಗ್ರೆಸ್ ಮುಖಂಡ ಎಚ್.ಎಂ.ಮನು ಮಾತನಾಡಿ, ಜೀವರಾಜ್ ವಾಮ ಮಾರ್ಗದ ಮೂಲಕ ಶಾಸಕ ಸ್ಥಾನಗಳಿಸುವ ಪ್ರಯತ್ನ ವಿಲವಾಗಿದೆ. ಆಮಿಷಕ್ಕೆ, ಹಣದಾಸೆಗೆ ಅಕ್ರಮ ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದರು.
ಬಗರ್‌ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ ಮಾತನಾಡಿ, ಸುಪ್ರೀಂ ಕೋರ್ಟ್ ಯಾವುದೇ ಪ್ರಕರಣಗಳನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ. ಮರು ಣಿಕೆಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೂ ಅನುಮಾನ ಬಂದ ಹಿನ್ನೆಲೆಯಲ್ಲಿ ತುರ್ತು ವಿಚಾರಣೆ ಕೈಗೆತ್ತಿಕೊಂಡು ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದರು.
ಪಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ಬಿ.ಎಸ್.ಸುಬ್ರಹ್ಮಣ್ಯ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ನಗರ ಘಟಕದ ಅಧ್ಯಕ್ಷ ಶ್ರೀಧರಪಾನಿ, ಮುಖಂಡರಾದ ಬೆನ್ನಿ, ದೇವಂತ್ ರಾಜ್‌ಗೌಡ, ಎಚ್.ಎಂ.ಶಿವಣ್ಣ, ಜುಬೇದಾ, ಪ್ರಶಾಂತ್.ಎಲ್.ಶೆಟ್ಟಿ, ನರೇಂದ್ರ, ಸುಹೇಲ್, ಸುನೀಲ್ ಕುಮಾರ್, ಸೈಯದ್‌ಸಿಗ್ಬತ್ತುಲ್ಲ, ಸುನೀಲ್, ಶರತ್‌ಶೆಟ್ಟಿ, ಮಂಜುನಾಥ್, ಸೈಯದ್ ಶಫೀರ್ ಅಹಮ್ಮದ್, ಚೇತನ್, ಮಂಜುನಾಥ್, ಇಂದಿರಾನಗರ ರಘು, ಮಾಳೂರುದಿಣ್ಣೆ ಮೂರ್ತಿ ಮತ್ತಿತರರು ಇದ್ದರು.