ಎನ್.ಆರ್.ಪುರ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭವನ್ನು ಪಿಎಸ್‌ಐ ನೂತನ್ ಉದ್ಘಾಟಿಸಿದರು.  
ಚಿಕ್ಕಮಗಳೂರು

ಇಂದಿನ ಶೇ.50 ರಷ್ಟು ಮಕ್ಕಳಲ್ಲಿ ಮಾನಸಿಕ ಒತ್ತಡ

ಎನ್.ಆರ್.ಪುರ: 10 ರಿಂದ 19ವರ್ಷದ ಒಳಗಿನ ಶೇ.50ರಷ್ಟು ಮಕ್ಕಳು ಸದಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಮಾನಸಿಕ ತಜ್ಞೆ ವೈದ್ಯೆ ಡಾ.ಐಶ್ವರ್ಯ ಹೇಳಿದರು.
ಎಲ್‌ಎ್ಚರ್ಚ್ ಸಭಾಂಗಣದಲ್ಲಿ ಜೋಸ್ೆ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಮಾನಸಿಕ ಆರೋಗ್ಯ ಚೆನ್ನಾಗಿ ಇದ್ದರೆ ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಮೂಡುತ್ತದೆ. ಪ್ರಪಂಚದಲ್ಲಿ ಪ್ರತಿ ದಿನ 13ಸಾವಿರ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ. ಪಾಲಕರು ತಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಪಿಎಸ್‌ಐ ಡಿ.ಇ.ನೂತನ್ ಮಾತನಾಡಿ, ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಪಾಲಕರು ಮನೆಯಲ್ಲೂ ಮಕ್ಕಳ ಬಗ್ಗೆ ಗಮನ ನೀಡಬೇಕು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಜತೆ ಪಾಲಕರ ಜವಬ್ದಾರಿಯೂ ಇದೆ ಎಂದರು.
ಸೈಂಟ್ ಪಬ್ಲಿಕ್ ಸ್ಕೂಲ್‌ನ ಪ್ರಾಚಾರ್ಯ ಮೋಹನ್ ಮಾತನಾಡಿ, ವಿದ್ಯೆ ಯಾರೂ ಕದಿಯಲಾಗದ ಸಂಪತ್ತು ಎಂದರು. ಅಂತರ್ ಜಿಲ್ಲಾ ಪ್ರೌಢ ಶಾಲೆಗಳ ಸ್ಪರ್ಧೆಯಲ್ಲಿ ಸೃಜನಾತ್ಮಕ ಕಥೆ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರೆನಿಶಾ ಹಾಗೂ ಅಂತರ್ ಜಿಲ್ಲಾ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹರ್ಷ, ಡಾ.ಐಶ್ವರ್ಯ ಹಾಗೂ ಪಿಎಸ್‌ಐ ಡಿ.ಇ.ನೂತನ್ ಅವರನ್ನು ಸನ್ಮಾನಿಸಲಾಯಿತು. ಡಾ.ಐಶ್ವರ್ಯ ಅವರು ಮಕ್ಕಳು ಹಾಗೂ ಪಾಲಕರೊಂದಿಗೆ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಸಂವಾದ ನಡೆಸಿದರು. ದೀಪ್ತಿ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿ ಅಧ್ಯಕ್ಷ ಾ.ಟಿನೋ, ಆಡಳಿತಾಧಿಕಾರಿ ಜೋಸ್ೆ, ಉಪಾಧ್ಯಕ್ಷ ಎ.ಜೆ.ಡೇವಿಸ್, ಕಾರ್ಯದರ್ಶಿ ಇ.ಸಿ.ಜೋಯಿ, ಆಡಳಿತ ಮಂಡಳಿ ಸದಸ್ಯರಾದ ಪ್ರಜ್ವಲ್, ಬಿನು, ಎಲ್.ಎ್ ಚರ್ಚ್ ಟ್ರಸ್ಟಿ ಬೇಬಿ ಇದ್ದರು.