ಚಿಕ್ಕಮಗಳೂರು: ಜಿಲ್ಲೆಯ 194 ಗ್ರಾಪಂನ 1893 ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಒಟ್ಟು ಶೇ.81.01 ರಷ್ಟು ಮತದಾನವಾಗಿದ್ದು, 5290 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿವೆ.
ಕರೊನಾ ಹಿನ್ನೆಲೆಯಲ್ಲಿ ಸಕಲ ಸುರಕ್ಷತಾ ಕ್ರಮದ ಜತೆಗೆ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 5 ಗಂಟೆವರೆಗೆ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಸುಗಮವಾಗಿ ನಡೆದಿದೆ. ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಮತದಾನವಾಗಿದ್ದು, ಶೇ.85.10ರಷ್ಟು ಮತ ಚಲಾವಣೆಯಾಗಿದೆ. ಅತೀ ಕಡಿಮೆ ಎಂದರೆ ಮೂಡಿಗೆರೆಯಲ್ಲಿ ಶೇ.76.29 ಮತದಾನವಾಗಿದೆ.
ಉಳಿದಂತೆ ಕಡೂರು ತಾಲೂಕಲ್ಲಿ ಶೇ.84.76, ತರೀಕೆರೆ ತಾಲೂಕಲ್ಲಿ ಶೇ.81, ಚಿಕ್ಕಮಗಳೂರು ತಾಲೂಕಲ್ಲಿ ಶೇ.80.94, ಅಜ್ಜಂಪುರ ತಾಲೂಕಲ್ಲಿ ಶೇ.80.06, ಎನ್.ಆರ್.ಪುರದಲ್ಲಿ ಶೇ.79.28 ಹಾಗೂ ಕೊಪ್ಪದಲ್ಲಿ ಶೇ.77. 83 ಮತದಾನವಾಗಿದೆ.