ಜಿಲ್ಲೆ

ಗಾಳಿಗಂಡಿಯಲ್ಲಿ ಬಸ್‌ನಿಲುಗಡೆಗೆ ಒತ್ತಾಯ

ಆಲ್ದೂರು: ಸಮೀಪದ ಗಾಳಿಗಂಡಿ ಗ್ರಾಮದ ಮೂಲಕ ಹಾದು ಹೋಗುವ ರಾಜ್ಯಹೆದ್ದಾರಿ-27ರಲ್ಲಿ ಚಿಕ್ಕಮಗಳೂರು ವಿಭಾಗದಿಂದ ಈ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ಸಿಪಿಐ ಹೋಬಳಿ ಕಾರ್ಯದರ್ಶಿ ಸುರೇಶ್ 2020ರಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಗ್ರಾಮಸ್ಥರ ಮನವಿಯ ಮೇರೆಗೆ ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ ರಾಜ್ಯರಸ್ತೆ ಸಾರಿಗೆ ಚಿಕ್ಕಮಗಳೂರು ವಿಭಾಗಕ್ಕೆ ಬಸ್‌ನಿಲುಗಡೆಗೆ ಆದೇಶಿಸಲಾಗಿತ್ತು. ಅಂದಿನಿಂದ ಎಲ್ಲ ರೀತಿಯ ವೇಗದೂತ ಬಸ್‌ಗಳು ಅಪ್ಪಣೆಯ ಮೇರೆಗೆ ನಿಲುಗಡೆ ಮಾಡಲಾಗುತ್ತಿತ್ತು. ಅದರೆ ಪ್ರಸ್ತುತ ಯಾವುದೇ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆ ಮಾಡುತ್ತಿಲ್ಲ ನಿಲುಗಡೆ ಮಾಡುವಂತೆ ಕೇಳಿದರೆ ಉಡಾೆಯಾಗಿ ಉತ್ತರ ನೀಡುತ್ತಾರೆ.

ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತಿದ್ದು, ಜಿಲ್ಲಾಧಿಕಾರಿಗಳ ಆದೇಶಕ್ಕೂ ಕಿಮ್ಮತ್ತು ನೀಡುತ್ತಿಲ್ಲ .ಮೆಸ್ಕಾಂ ವಿತರಣ ಕೇಂದ್ರ ಹಾಗೂ ಬಿಸಿಎಂ ಹಾಸ್ಟಲ್, ಅರಣ್ಯ ಇಲಾಖೆ ಕಚೇರಿ ಹಾಗೂ ಖಾಸಗಿ ಶಾಲೆಗಳಿವೆ. ಈ ಭಾಗದಲ್ಲಿ ಜನರ ಒಡಾಟ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಬಹುತೇಕ ಕೂಲಿ ಕಾರ್ಮಿಕ ಕುಟುಂಬಗಳು ವಾಸವಾಗಿದ್ದು, ಬಸ್‌ಗಾಗಿ ಸುಮಾರು 2 ಕೀಲೋ ಮೀಟರ್ ಆಲ್ದೂರು ಪಟ್ಟಣಕ್ಕೆ ಬರಬೇಕು. ಇದರಿಂದ ಜನರಿಗೆ ತೊಂದರೆಯಾಗಿದ್ದು, ಈ ರಸ್ತೆ ಮೂಲಕ ಬಾಳೆಹೊನ್ನೂರು, ಶೃಂಗೇರಿ, ಕೂಪ್ಪ, ಹೊರನಾಡಿಗೆ ಈ ಮಾರ್ಗದಲ್ಲೇ ಬಸ್‌ಗಳು ಸಂಚರಿಸುತ್ತಿವೆ. ಈ ವೃತ್ತದಲ್ಲಿ ಖಾಸಗಿ ಬಸ್‌ಗಳ ನಿಲುಗಡೆ ಮಾಡಲಾಗುತ್ತಿದೆ. ಚಿಕ್ಕಮಗಳೂರು ವಿಭಾಗದಿಂದ ಸದರಿ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಮತ್ತೊಮ್ಮೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.