ಬಾಳೆಹೊನ್ನೂರು: ಕಂದಾಯ ಅದಾಲತ್ನಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಹೇಳಿದರು.
ಖಾಂಡ್ಯ ಹೋಬಳಿ ಕಡಬಗೆರೆ ನಾಡಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಕಂದಾಯ ಅದಾಲತ್ನಲ್ಲಿ ಮಾತನಾಡಿದರು.
ಖಾತೆ ಬದಲಾವಣೆ ಮಾಡಿಸುವವರು ಪಹಣಿ, ಮ್ಯುಟೇಷನ್, ಆಧಾರ್ ಕಾರ್ಡ್, ಗುರುತಿನ ಚೀಟಿ, ಪಡಿತರ ಚೀಟಿ, ಮರಣ ದೃಢೀಕರಣ ಪತ್ರ, ವಂಶವೃಕ್ಷದ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಆದೇಶದಂತೆ ಹೋಬಳಿಯಲ್ಲಿ ಪೌತಿ ಖಾತೆ ಆಂದೋಲನ, ಪಹಣಿ ತಿದ್ದುಪಡಿ, ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಖಾಂಡ್ಯ ಹೋಬಳಿಯಲ್ಲಿ 94ಸಿ, ಪೌತಿ ಖಾತೆ ಬದಲಾವಣೆ, ಪಹಣಿ ತಿದ್ದುಪಡಿ, ವಿವಿಧ ವೇತನಗಳ ಮಂಜೂರಾತಿ ಕೋರಿ 40 ಅರ್ಜಿಗಳು ಸ್ವೀಕೃತವಾಗಿದ್ದು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಹಣಿ ತಿದ್ದುಪಡಿ ಆಗದಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಪ್ರತಿ ಗ್ರಾಮಗಳಿಗೆ ತೆರಳಿ ಖಾತೆ ಬದಲಾವಣೆ ಮಾಡಿಸುತ್ತದೆ. ಖಾತೆ ಬದಲಾವಣೆಯಿಂದ ಕೃಷಿಕರು ಸರ್ಕಾರದ ಸವಲತ್ತು ಪಡೆಯಲು ಸಹಕಾರಿಯಾಗಿದೆ ಎಂದರು.
----
30ಬಿಹೆಚ್ಆರ್ 4:
ಕಡಬಗೆರೆ ನಾಡಕಚೇರಿ ಆವರಣದಲ್ಲಿ ಕಂದಾಯ ಅದಾಲತ್ ನಡೆಯಿತು. ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ತಹಸೀಲ್ದಾರ್ ಕೆ.ಜೆ.ಕಾಂತರಾಜ್ ಇತರರಿದ್ದರು.