ಜಿಲ್ಲೆ

ಚಿಕ್ಕಹಂದಿಗೋಳದಲ್ಲಿ ಗುರುರ್ಪೂಣಿಮೆ ಪ್ರವಚನ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಸಕಲ ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಮಾನವ ಮಹಾ ಮಾನವನಾಗಬೇಕಾದರೆ ಭಕ್ತಿ, ಜ್ಞಾನ, ವೈರಾಗ್ಯದ ಭಾವವನ್ನು ಹೊಂದಬೇಕು. ಇದಕ್ಕೆ ಪುರಾಣ, ಪುಣ್ಯಕತೆಗಳು, ಪ್ರವಚನಗಳು ಪೂರಕವಾಗಿವೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯ ಡಾ.ಕಲ್ಲಯ್ಯಜ್ಜನವರು ಹೇಳಿದರು.
ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದ ಹಿರೇಮಠದ ಭಕ್ತರು ಹಾಗೂ ಶ್ರೀಗುರು ಸಾಂಸತಿಕ ಶಿವಾನುಭವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಗುರುರ್ಪೂಣಿಮೆ ನಿಮಿತ್ಯ ಏರ್ಪಡಿಸಿರುವ ಸುೇತ್ರ ಭಾಗ್ಯವಂತಿ ದೇವಿಯ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅಜ್ಞಾನದ ಕತ್ತಲೆಯನ್ನು ಹೊಡೆದೊಡಿಸಿ ಸುಜ್ಞಾನದ ಬೆಳಕನ್ನು ಪಡೆಯಬೇಕಾದರೆ ಪುರಾಣ, ಪ್ರವಚನ, ಸಂಗೀತವನ್ನು ಆಲಿಸಬೇಕು ಎಂದರು.
ಪ್ರಭಯ್ಯ ಹಿರೇಮಠ, ಬಸಯ್ಯ ಹಿರೇಮಠ, ಸಿದ್ಧೇಶ್ವರ ಶಾಸ್ತ್ರೀಗಳು, ಈರಣ್ಣ ಗೌಡರ ಇತರರು ಇದ್ದರು.